HomeKarnatakaBIG NEWS : ಬೆಂಗಳೂರಿನಲ್ಲಿ ‘ಮಹಾಲಕ್ಷ್ಮಿ’ ಭೀಕರ ಹತ್ಯೆ ಕೇಸ್ : ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿ...

BIG NEWS : ಬೆಂಗಳೂರಿನಲ್ಲಿ ‘ಮಹಾಲಕ್ಷ್ಮಿ’ ಭೀಕರ ಹತ್ಯೆ ಕೇಸ್ : ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿ ಬೀಳಿಸುವ ಸಂಗತಿ ಬಯಲು..!

ಬೆಂಗಳೂರು : ಬೆಂಗಳೂರಿನಲ್ಲಿ ‘ಮಹಾಲಕ್ಷ್ಮಿ’ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿ ಬೀಳಿಸುವ ಸಂಗತಿ  ಹೊರಬಿದ್ದಿದೆ.

52 ಪೀಸ್ ಮಾಡಿರೋ ದೇಹವನ್ನ ಬೌರಿಂಗ್ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ.  ಮಹಾಲಕ್ಷ್ಮಿ ಎದೆ ಮತ್ತು ಹೊಟ್ಟೆ ಭಾಗಕ್ಕೆ ಚುಚ್ಚಿರುವ ಹಂತಕ ನಂತರ ತಲೆಯನ್ನ ಬೇರ್ಪಡಿಸಿದ್ದಾನೆ. ತಲೆಯನ್ನು ಬೇರ್ಪಡಿಸಿರುವ ಹಂತಕ 52 ಪೀಸ್ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಗೂ ಮುನ್ನ ವೈದ್ಯರು 52 ಪೀಸ್ ಜೋಡಿಸಿದ್ದಾರೆ, ಸದ್ಯ ಕರುಳಿನ ಭಾಗ ಮತ್ತು ಹೊಟ್ಟೆ ಭಾಗವನ್ನು ವೈದ್ಯರು ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಜ್ಞೆ ತಪ್ಪಿಸಿ ಕೊಲೆ ಮಾಡಿದನಾ..? ಅಥವಾ ವಿಷ ಕೊಟ್ಟು ಕೊಲೆ ಮಾಡಿದನಾ? ಎಂಬುದನ್ನು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ದೇಹದಲ್ಲಿ ವಿಷ ಇದೆಯಾ ಅನ್ನೋ ವರದಿಬರಲು 2-3 ತಿಂಗಳು ಬೇಕು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಮಹಿಳಾ ಆಯೋಗ ಸುಮುಟೋ ಕೇಸ್ ದಾಖಲಿಸಿಕೊಂಡಿದೆ. ಮೂರು ದಿನದಲ್ಲಿ ವರದಿ ನೀಡುವಂತೆ ಪೊಲೀಸ್ ಇಲಾಖೆ ವರದಿ ಕೇಳಿದೆ. . ಕುಟುಂಬದಲ್ಲಿನ ಜಗಳ, ಮನಸ್ತಾಪದ ಬಗ್ಗೆ ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದ್ದು, ತಾಯಿ ನೀಡಿದ ದೂರಿನಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular