alex Certify ರಾಜ್ಯದಲ್ಲಿ ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆ ಜಾರಿ: ಕ್ಯೂಆರ್ ಕೋಡ್, ಚಿಪ್ ಹೊಂದಿದ ಸ್ಮಾರ್ಟ್ DL, RC ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆ ಜಾರಿ: ಕ್ಯೂಆರ್ ಕೋಡ್, ಚಿಪ್ ಹೊಂದಿದ ಸ್ಮಾರ್ಟ್ DL, RC ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಒಂದು ದೇಶ ಒಂದು ಕಾರ್ಡ್ ಯೋಜನೆ ಜಾರಿಯಾಗಲಿದ್ದು, ಕ್ಯೂಆರ್ ಕೋಡ್ ಮತ್ತು ಚಿಪ್ ಹೊಂದಿದ ಸ್ಮಾರ್ಟ್ ಡಿಎಲ್ ಮತ್ತು ಆರ್‌ಸಿಗಳನ್ನು 2025ರ ಜನವರಿಯಿಂದ ವಿತರಿಸಲಾಗುವುದು.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2019 ರಲ್ಲಿ ಒಂದು ದೇಶ ಒಂದು ಕಾರ್ಡ್ ಜಾರಿಗೆ ಸೂಚನೆ ನೀಡಿತ್ತು. ಈ ಯೋಜನೆಯಂತೆ ದೇಶದಲ್ಲಿ ಒಂದೇ ಮಾದರಿಯ ಕಾರ್ಡ್ ಗಳನ್ನು ಕೆಲವು ರಾಜ್ಯಗಳು ಜಾರಿಗೆ ತಂದಿವೆ. ಕರ್ನಾಟಕದಲ್ಲಿ ಈ ಹಿಂದೆ ಡಿಎಲ್ ಮತ್ತು ಆರ್.ಸಿ. ಕಾರ್ಡ್ ಪೂರೈಕೆಗಾಗಿ ನೀಡಿದ್ದ ಗುತ್ತಿಗೆ ಅವಧಿ 2024ರ ಫೆಬ್ರವರಿವರೆಗೆ ಇದ್ದ ಕಾರಣ ನಂತರ ಹೊಸ ಕಾರ್ಡ್ ಪೂರೈಕೆ ಗುತ್ತಿಗೆ ಕರೆಯಲು ಸಾರಿಗೆ ಇಲಾಖೆ ನಿರ್ಧಾರ ಕೈಗೊಂಡಿತ್ತು.

ಅಂತೆಯೇ ಡಿಎಲ್ ಮತ್ತು ಆರ್.ಸಿ. ಸ್ಮಾರ್ಟ್ ಕಾರ್ಡ್ ಟೆಂಡರ್ ಕರೆಯಲಾಗಿದ್ದು, ಪರಿಶೀಲನೆ ಹಂತದಲ್ಲಿದೆ. ಇನ್ನೆರಡು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಂಡು ಅನುಮೋದನೆ ದೊರೆತಲ್ಲಿ 60 ದಿನದಲ್ಲಿ ಸ್ಮಾರ್ಟ್ ಡಿಎಲ್ ಮತ್ತು ಆರ್.ಸಿ. ಕಾರ್ಡ್ ಗಳ ವಿತರಣೆ ಆರಂಭವಾಗಲಿದೆ.

ಇನ್ನು ಮುಂದೆ ಎಲ್ಲಾ ರಾಜ್ಯಗಳ ಡಿಎಲ್ ಗಳು ಮತ್ತು ಆರ್.ಸಿ.ಗಳು ಒಂದೇ ರೀತಿ ಇರಲಿದ್ದು, ಕ್ಯೂಆರ್ ಕೋಡ್ ನಿಂದಾಗಿ ಸಂಚಾರ ಪೊಲೀಸರು ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು ಸುಲಭವಾಗಿ ವಾಹನ ಚಾಲಕರು, ಮಾಲೀಕರ ವಿವರ ಪರಿಶೀಲಿಸಬಹುದಾಗಿದೆ.

ಡಿಎಲ್ ನಲ್ಲಿ ಕಾರ್ಡ್ ದಾರರ ಹೆಸರು, ಫೋಟೋ, ವಿಳಾಸ, ಸಿಂಧುತ್ವ ಅವಧಿ, ಜನ್ಮ ದಿನಾಂಕ, ರಕ್ತದ ಗುಂಪು ಮೊಬೈಲ್ ಸಂಖ್ಯೆ, ತುರ್ತು ಸಂಪರ್ಕ ಸಂಖ್ಯೆ ಸೇರಿ 25ಕ್ಕೂ ಹೆಚ್ಚು ಮಾಹಿತಿ ಇರುತ್ತದೆ.

ಆರ್.ಸಿ. ಕಾರ್ಡ್ ನಲ್ಲಿ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಮಾನ್ಯತೆ ಅವಧಿ, ಎಂಜಿನ್, ಚಾಸಿಸ್ ನಂಬರ್, ಮಾಲೀಕರ ವಿವರ, ವಿಳಾಸ ಜೊತೆಗೆ ವಾಹನ ತಯಾರಕ ಕಂಪನಿ ಹೆಸರು, ಮಾಡೆಲ್, ವಾಹನದ ಶೈಲಿ, ಆಸನ ಸಾಮರ್ಥ್ಯ, ಸಾಲ ನೀಡಿದ ಸಂಸ್ಥೆಗಳ ವಿವರ ಕೂಡ ಇರಲಿದೆ. ಹೊಸ ಸ್ಮಾರ್ಟ್ ಕಾರ್ಡ್ ಗಳು ಪಾಲಿಕಾರ್ಬೋನೇಟ್ ಆಗಿರುವುದರಿಂದ ಮುರಿಯುವುದಿಲ್ಲ. ಅಕ್ಷರಗಳು ಕೂಡ ಅಳಿಸಿ ಹೋಗುವುದಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...