alex Certify ಅಪ್ಪಿತಪ್ಪಿಯೂ ಮನೆಯ ಸಮೀಪ ಈ 5 ಗಿಡಗಳನ್ನು ನೆಡಬೇಡಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿಯೂ ಮನೆಯ ಸಮೀಪ ಈ 5 ಗಿಡಗಳನ್ನು ನೆಡಬೇಡಿ…..!

ಗಿಡಗಳನ್ನು ನೆಡುವುದು ಬಹಳ ಒಳ್ಳೆಯ ಅಭ್ಯಾಸ. ಆದರೆ ಕೆಲವೊಂದು ಗಿಡಗಳನ್ನು ಅಪ್ಪಿತಪ್ಪಿಯೂ ಮನೆಯ ಸುತ್ತಮುತ್ತ ನೆಡಬಾರದು. ಅವು ಬೆಳೆದು ಮರವಾದ ಬಳಿಕ ಹಾವುಗಳನ್ನು ಆಕರ್ಷಿಸುತ್ತವೆ. ವಿಷಕಾರಿ ಹಾವುಗಳು ಈ ಮರಗಳಲ್ಲಿ ನೆಲೆಸುತ್ತವೆ.

ಶ್ರೀಗಂಧದ ಮರ

ಶ್ರೀಗಂಧದ ಮರಗಳು ವಿಷಕಾರಿ ಹಾವುಗಳನ್ನು ಹೆಚ್ಚು ಆಕರ್ಷಿಸುತ್ತವೆ. ಶ್ರೀಗಂಧದ ಸುಗಂಧದಿಂದಾಗಿ ಅದರ ಮೇಲೆ ಹೇರಳವಾಗಿ ಪಕ್ಷಿಗಳು ಮತ್ತು ಇತರ ಕೀಟಗಳು ಕುಳಿತಿರುತ್ತವೆ. ಆ ಪಕ್ಷಿಗಳು ಮತ್ತು ಕೀಟಗಳನ್ನು ಬೇಟೆಯಾಡಲು ವಿಷಕಾರಿ ಹಾವುಗಳು ಶ್ರೀಗಂಧದ ಮರಗಳ ಬಳಿ ಗುಂಪು ಗುಂಪಾಗಿ ಸೇರುತ್ತವೆ. ಆದ್ದರಿಂದ ಮನೆಯ ಸಮೀಪ ಇವುಗಳನ್ನು ನೆಡಬೇಡಿ.

ಸಿಟ್ರಸ್ ಮರಗಳು

ಹುಳಿ ಹಣ್ಣುಗಳನ್ನು ಹೊಂದಿರುವ ಮರಗಳ ಕಡೆಗೆ ಹಾವುಗಳು ಆಕರ್ಷಿತವಾಗುತ್ತವೆ. ಏಕೆಂದರೆ ಹುಳಿ ಹಣ್ಣುಗಳನ್ನು ತಿನ್ನಲು ಕೀಟಗಳು ಮತ್ತು ಪಕ್ಷಿಗಳು ಆ ಮರಗಳ ಬಳಿ ಸೇರುತ್ತವೆ. ಹಾವುಗಳು ಕೂಡ ಆ ಕೀಟಗಳನ್ನು ತಿನ್ನಲು ಮರಗಳ ಬಳಿ ಕಾಯುತ್ತಿರುತ್ತವೆ.

ಮಲ್ಲಿಗೆ ಗಿಡ ಮತ್ತು ಬಳ್ಳಿಗಳು

ಮಲ್ಲಿಗೆ ಗಿಡಗಳು ಹಾವುಗಳ ನೆಚ್ಚಿನ ಆಶ್ರಯತಾಣಗಳು. ಹಾವುಗಳು ಈ ಬಳ್ಳಿಯ ದಟ್ಟವಾದ ಎಲೆಗಳ ಅಡಿಯಲ್ಲಿ ಅಡಗಿಕೊಳ್ಳಲು ಸುರಕ್ಷಿತ ಸ್ಥಳವನ್ನು ಕಂಡುಕೊಳ್ಳುತ್ತವೆ. ಇದಲ್ಲದೆ ಮಲ್ಲಿಗೆಯ ಸುವಾಸನೆ ಕೂಡ ಹಾವುಗಳನ್ನು ಆಕರ್ಷಿಸುತ್ತದೆ.

ಸೈಪ್ರೆಸ್ ಮರ

ಸೈಪ್ರೆಸ್ ಮರವನ್ನು ದೀರ್ಘಾಯುಷ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕ ಜನರು ತಮ್ಮ ಪೂರ್ವಜರ ನೆನಪಿಗಾಗಿ ಸಮಾಧಿಯ ಬಳಿ ಸೈಪ್ರೆಸ್ ಮರಗಳನ್ನು ನೆಡುತ್ತಾರೆ. ಆದರೆ ಈ ಮರಕ್ಕೆ ಇನ್ನೊಂದು ವಿಶೇಷತೆ ಇದೆ. ಈ ಮರದ ಎಲೆಗಳು ತುಂಬಾ ದಟ್ಟವಾಗಿರುತ್ತವೆ, ಹಾವುಗಳಿಗೆ ಅಡಗಿ ಕೂರಲು ಇದು ನೆರವಾಗುತ್ತದೆ. ಗುಪ್ತಸ್ಥಳದಲ್ಲಿರುವ ಹಾವುಗಳು ಯಾವುದೇ ಪ್ರಾಣಿಯನ್ನು ಸುಲಭವಾಗಿ ಬೇಟೆಯಾಡಬಹುದು.

ದೇವದಾರು ಮರ

ದೇವದಾರು ಮರದ ಕಡೆಗೆ ಹಾವುಗಳು ಆಕರ್ಷಿತವಾಗುತ್ತವೆ. ಏಕೆಂದರೆ ಅದರಿಂದ ಸುವಾಸನೆ ಹೊರಸೂಸುತ್ತದೆ. ಇದರಿಂದಾಗಿ ಕೀಟಗಳು ಕೂಡ ದೇವದಾರು ಮರದಲ್ಲಿ ಮನೆಕಟ್ಟಿಕೊಳ್ಳುತ್ತವೆ. ಆ ಕೀಟಗಳನ್ನು ತಿನ್ನಲು ಹಾವುಗಳು ಕೂಡ ಈ ಮರದ ಮೇಲೆ ಬಿಡಾರ ಹೂಡುತ್ತವೆ. ಈ ಮರದ ಕೆಳಗೆ ಬಿಲಗಳಲ್ಲಿ ವಾಸಿಸುವ ಇಲಿಗಳು ಹಾವುಗಳಿಗೆ ಆಹಾರವಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...