alex Certify ರಾಜ್ಯ ಮಟ್ಟದ ‘ದಸರಾ ಕಲಾ ಪ್ರದರ್ಶನ’ಕ್ಕೆ ಕಲಾಕೃತಿಗಳ ಆಹ್ವಾನ : ವಿಶೇಷ ಬಹುಮಾನವೂ ಇದೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಮಟ್ಟದ ‘ದಸರಾ ಕಲಾ ಪ್ರದರ್ಶನ’ಕ್ಕೆ ಕಲಾಕೃತಿಗಳ ಆಹ್ವಾನ : ವಿಶೇಷ ಬಹುಮಾನವೂ ಇದೆ..!

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ – 2024ರಲ್ಲಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ಧಾರ್ಥನಗರ, ಮೈಸೂರು ಸಂಸ್ಥೆಯ ಆವರಣದಲ್ಲಿ 04-10-2024 ರಿಂದ 07-10-2024 ರವರೆಗೆ ನಡೆಯುವ ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ.

ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಛಾಯಚಿತ್ರ, ಅನ್ವಯ ಕಲೆ ವಿಭಾಗಗಳಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಿಭಾಗಗಳಿರುತ್ತದೆ. ಸಾಂಪ್ರದಾಯಿಕ ಚಿತ್ರಕಲೆ, ಸಾಂಪ್ರದಾಯಿಕ ಶಿಲ್ಪಕಲೆ, ಕರಕುಶಲ ಕಲೆ / ಇನ್ಲೇ ವಿಭಾಗಗಳಲ್ಲಿ ಹವ್ಯಾಸಿ ವಿಭಾಗವಿರುವುದಿಲ್ಲ. ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನಗಳನ್ನು ನೀಡಲಾಗುವುದು.

ಕಲಾಕೃತಿಗಳನ್ನು 30-09-2024 ರೊಳಗೆ ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) , ಸಿದ್ಧಾರ್ಥನಗರ, ಮೈಸೂರು – 570011, ಸಂಸ್ಥೆಯ ಕಛೇರಿ ಅವಧಿಯಲ್ಲಿ ಸಲ್ಲಿಸುವುದು. ಕಲಾಕೃತಿಗಳನ್ನು ಸಲ್ಲಿಸುವ ಕಲಾವಿದರು ಸಂಪೂರ್ಣ ವಿವರವನ್ನು ಸ್ವಯಂ ದೃಢೀಕರಣದೊಂದಿಗೆ ಉಪಸಮಿತಿಗೆ ತಲುಪಿಸುವುದು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...