alex Certify ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಅಭ್ಯಾಸ ಮಾಡಿಕೊಳ್ಳಿ ಈ 5 ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಅಭ್ಯಾಸ ಮಾಡಿಕೊಳ್ಳಿ ಈ 5 ವಿಷಯ

ಜೀವನದಲ್ಲಿ ಸಂತೋಷವಾಗಿರಲು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಅನೇಕ ಜನರು ತಮ್ಮ ಸಂತೋಷಕ್ಕಾಗಿ ಇತರರನ್ನು ಅವಲಂಬಿಸಿರುತ್ತಾರೆ. ಉದಾಹರಣೆಗೆ  ಸ್ನೇಹಿತರು, ಸಂಗಾತಿ, ಸಂಬಂಧಿಕರು ಜೊತೆಗಿದ್ದರೆ ಅವರು ಖುಷಿಯಾಗಿರುತ್ತಾರೆ. ಈ ಕೆಳಗಿನ 5 ಸುಲಭ ಮಾರ್ಗಗಳನ್ನು ಅಳವಡಿಸಿಕೊಂಡರೆ ಒಂಟಿಯಾಗಿದ್ದರೂ ಸಂತೋಷವಾಗಿರಬಹುದು.

ನಿಮ್ಮನ್ನು ಪ್ರೀತಿಸಿ

ಮೊದಲನೆಯದಾಗಿ ನಮ್ಮನ್ನು ನಾವು ಪ್ರೀತಿಸಬೇಕು, ನಮಗೆ ಪ್ರಾಮುಖ್ಯತೆ ಕೊಡಬೇಕು. ನಮಗೆ ನಾವು ಪ್ರಾಮುಖ್ಯತೆ ನೀಡದಿದ್ದರೆ ಜಗತ್ತು ನಮ್ಮ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಮ್ಮನ್ನು ನಾವು ಪ್ರೀತಿಸದೇ ಇದ್ದಲ್ಲಿ ಅತೃಪ್ತರಾಗಿ ಅಸಂತೋಷದಿಂದಿರುತ್ತೇವೆ. ಉತ್ಪಾದಕತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

ಸಾಕಷ್ಟು ನಿದ್ರೆ ಪಡೆಯಿರಿ

ಸಂತೋಷವಾಗಿರಲು ಬೇಕಿರುವ ಮತ್ತೊಂದು ಪ್ರಮುಖ ಅಭ್ಯಾಸವೆಂದರೆ ನಿದ್ರೆ. ಸಂಪೂರ್ಣ ನಿದ್ರೆ ಮಾಡುವುದರಿಂದ ಹೆಚ್ಚು ಶಕ್ತಿಯುತ ಮತ್ತು ಸಕ್ರಿಯರಾಗಬಹುದು. ಅದು ಧನಾತ್ಮಕತೆ ಮತ್ತು ಸಂತೋಷವನ್ನು ನೀಡುತ್ತದೆ. ನಿದ್ರೆಯ ಕೊರತೆಯಾದರೆ ದಣಿವಿನ ಅನುಭವವಾಗುತ್ತದೆ. ಏಕಾಗ್ರತೆ ಇರುವುದಿಲ್ಲ, ದುಃಖ ಕೂಡ ಸಹಜ.

ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ

ಸಂತೋಷವಾಗಿರಲು ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಣವನ್ನು ಸರಿಯಾಗಿ ನಿರ್ವಹಿಸದ ಜನರು ಹಣದ ಕೊರತೆಯಿಂದಾಗಿ ಅತೃಪ್ತರಾಗುತ್ತಾರೆ. ಹಣವನ್ನು ಸರಿಯಾಗಿ ನಿರ್ವಹಿಸುವುದು ಹೇಗೆ ಎಂದು ತಿಳಿದಿರುವವರು ಕಡಿಮೆ ಸಂಬಳದಲ್ಲಿಯೂ ಸಂತೋಷವಾಗಿರುತ್ತಾರೆ.

ವ್ಯಾಯಾಮ ಮಾಡುವ ಅಭ್ಯಾಸ

ದೈಹಿಕ ಚಟುವಟಿಕೆಯು ಹಲವಾರು ಮೆದುಳಿನ ರಾಸಾಯನಿಕಗಳನ್ನು ಉತ್ತೇಜಿಸುತ್ತದೆ. ಅದು ಸಂತೋಷ, ಹೆಚ್ಚು ಶಾಂತ ಮತ್ತು ಕಡಿಮೆ ಆತಂಕವನ್ನುಂಟು ಮಾಡುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡಿದಾಗ ನಮ್ಮ ಲುಕ್‌ ಕೂಡ ಸುಧಾರಿಸಿ, ನಮ್ಮನ್ನು ನಾವೇ ಇಷ್ಟಪಡುವಂತಾಗುತ್ತದೆ. ಇದು ನಮ್ಮ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ.

ಇತರರಿಂದ ನಿರೀಕ್ಷಿಸಬೇಡಿ

ನೀವು ಎಷ್ಟು ಒಳ್ಳೆಯವರು ಅಥವಾ ಇತರರ ಬಗ್ಗೆ ನೀವು ಎಷ್ಟು ಚೆನ್ನಾಗಿ ಯೋಚಿಸುತ್ತೀರಿ, ಇತರರಿಗೆ ನೀವು ಎಷ್ಟು ಸಹಾಯ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವು ಯಾವುದೇ ವ್ಯಕ್ತಿಯಿಂದ ನಿರೀಕ್ಷೆಗಳನ್ನು ಹೊಂದಿದ್ದರೆ ಅದು ದುಃಖಕ್ಕೆ ಕಾರಣವಾಗಬಹುದು. ಆ ವ್ಯಕ್ತಿ ಯಾರೇ ಆಗಿರಲಿ. ತಂದೆ-ತಾಯಿ, ಒಡಹುಟ್ಟಿದವರು, ಗಂಡ-ಹೆಂಡತಿ ಅಥವಾ ಸ್ನೇಹಿತರು ಯಾರಿಂದಲೂ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಏಕೆಂದರೆ ನಿರೀಕ್ಷೆಗಳು ಈಡೇರದಿದ್ದಾಗ ಮನಸ್ಸಿಗೆ ನೋವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...