ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜೈಲು ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಕೋರ್ಟ್ ಆದೇಶ ನೀಡಿದರೂ ತಮಗೆ ಚೇರ್ ನೀಡಿಲ್ಲ. ಪದೇ ಪದೇ ಕೇಳಿದರೂ ಚೇರ್ ಕಲ್ಪಿಸಿಲ್ಲ ಎಂದು ಜೈಲು ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವು ಹಿನ್ನೆಲೆ ಚೇರ್ ಗಾಗಿ ಮನವಿ ಮಾಡಿದ್ದರು. ಮನವಿ ಮಾಡಿ ವಾರ ಕಳೆದರೂ ಜೈಲು ಅಧಿಕಾರಿಗಳು ಚೇರ್ ಕೊಡದಿರುವುದಕ್ಕೆ ಗರಂ ಆಗಿದ್ದಾರೆ. ನ್ಯಾಯಾಲಯ ಕುರ್ಚಿ ಕೊಡಲು ಸೂಚನೆ ನೀಡಿದರೂ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. ಆರೋಪಿ ದರ್ಶನ್ ಗೆ ಖಡಕ್ಕಾಗಿ ತಿರುಗೇಟು ನೀಡಿದ ಜೈಲಿನ ಅಧಿಕಾರಿಗಳು ನ್ಯಾಯಾಲಯದ ಅಧಿಕೃತ ಆದೇಶ ಬಂದ ನಂತರವೇ ಕುರ್ಚಿ ಕೊಡುತ್ತೇವೆ ಎಂದಿದ್ದು, ಜೈಲು ಅಧಿಕಾರಿಗಳ ಮಾತಿಗೆ ದರ್ಶನ್ ಸಪ್ಪೆ ಮುಖ ಮಾಡಿ ಕೂತಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಕೆಲವು ಅವಶ್ಯಕ ವಸ್ತು ಕೊಡುವ ಬಗ್ಗೆ ನಿಯಮಗಳು ಇವೆ. ಕೋರ್ಟ್ ಆದೇಶ ಬೇಕು ಎಂದು ಹೇಳಲಾಗಿದೆ.