alex Certify ಕ್ಯಾನ್ಸರ್‌ಗೆ ಪವಾಡದ ರೀತಿಯಲ್ಲೊಂದು ಮದ್ದು; ಒಂದೇ ಗಂಟೆಯಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಬಲ್ಲದು ಜೇಣುನೊಣದ ವಿಷ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ಗೆ ಪವಾಡದ ರೀತಿಯಲ್ಲೊಂದು ಮದ್ದು; ಒಂದೇ ಗಂಟೆಯಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಬಲ್ಲದು ಜೇಣುನೊಣದ ವಿಷ…..!

ಕ್ಯಾನ್ಸರ್‌ ಎಂಬ ಮಹಾಮಾರಿ ಪ್ರತಿ ವರ್ಷ ಲಕ್ಷಾಂತರ ಜನರನ್ನು ಕೊಲ್ಲುತ್ತಿದೆ. ಈ ರೋಗವನ್ನು ಆರಂಭಿಕ ಹಂತಗಳಲ್ಲಿ ಗುರುತಿಸುವುದು ಕಷ್ಟ. ರೋಗ ಪತ್ತೆಯಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ, ಹಾಗಾಗಿ ರೋಗಿಯನ್ನು ಬದುಕಿಸುವುದು ಸವಾಲಾಗಿ ಪರಿಣಮಿಸುತ್ತದೆ. ಕ್ಯಾನ್ಸರ್ ಅನ್ನು ಜಯಿಸಲು ಪ್ರಪಂಚದಾದ್ಯಂತ ವಿವಿಧ ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆಯುತ್ತಲೇ ಇವೆ. ಇದೀಗ ಅಚ್ಚರಿಯ ಫಲಿತಾಂಶವೊಂದರಲ್ಲಿ ಜೇನುನೊಣದ ವಿಷವು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ ಎಂಬುದು ದೃಢಪಟ್ಟಿದೆ.

ಈ ಸಂಶೋಧನೆಯನ್ನು 2020ರಲ್ಲಿಯೇ ನಡೆಸಲಾಗಿತ್ತು. ಈ ಅಧ್ಯಯನದ ಪ್ರಕಾರ ಜೇನುನೊಣದ ವಿಷದಲ್ಲಿರುವ ಮೆಲಿಟಿನ್ ಅಂಶವು ಟ್ರಿಪಲ್-ನೆಗೆಟಿವ್‌ ಸ್ತನ ಕ್ಯಾನ್ಸರ್ ಮತ್ತು HER2- ಎನ್‌ರಿಚ್‌ ಸ್ತನ ಕ್ಯಾನ್ಸರ್ ಕೋಶಗಳನ್ನು ತ್ವರಿತವಾಗಿ ನಾಶಪಡಿಸುತ್ತದೆ.

ಕ್ಯಾನ್ಸರ್ ಕೋಶಗಳ ಮೇಲೆ ಜೇನುನೊಣದ ವಿಷದ ಪರಿಣಾಮ

ಸಂಶೋಧನೆಯ ಸಂದರ್ಭದಲ್ಲಿ ಸಾಮಾನ್ಯ ಸ್ತನ ಕೋಶಗಳು ಮತ್ತು ಸ್ತನ ಕ್ಯಾನ್ಸರ್‌ನ ವಿವಿಧ ಉಪವಿಭಾಗಗಳ ಮೇಲೆ ಜೇನುನೊಣದ ವಿಷವನ್ನು ಪರೀಕ್ಷಿಸಲಾಗಿದೆ. ಹಾರ್ಮೋನ್ ರಿಸೆಪ್ಟರ್-ಪಾಸಿಟಿವ್, HER2- ಎನ್‌ರಿಚ್‌ ಮತ್ತು ಟ್ರಿಪಲ್-ನೆಗೆಟಿವ್‌ ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ಈ ಪ್ರಯೋಗ ನಡೆದಿದೆ.

ಮೆಲಿಟಿನ್ ಒಂದು ಸಣ್ಣದಾದ ಆದರೆ ಅತ್ಯಂತ ಶಕ್ತಿಯುತವಾದ ಪೆಪ್ಟೈಡ್. ಇದು ಜೇನುನೊಣದ ವಿಷದ ಸುಮಾರು 50 ಪ್ರತಿಶತದಷ್ಟಿರುತ್ತದೆ. ಈ ಪೆಪ್ಟೈಡ್ ಕ್ಯಾನ್ಸರ್ ಕೋಶಗಳ ಪೊರೆಯನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ವಿಭಜನೆಗೆ ಅಗತ್ಯವಾದ ಕ್ಯಾನ್ಸರ್ ಕೋಶಗಳಲ್ಲಿನ ರಾಸಾಯನಿಕ ಸಂದೇಶಗಳನ್ನು ಮೆಲಿಟಿನ್ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಪರಿಣಾಮವು ಕೇವಲ 20 ನಿಮಿಷಗಳಲ್ಲಿ ಕಂಡುಬಂದಿದ್ದು ವಿಶೇಷ. ಒಂದು ಗಂಟೆಯೊಳಗೆ ಮೆಲಿಟಿನ್, ಕ್ಯಾನ್ಸರ್ ಕೋಶಗಳ ಪೊರೆಯನ್ನು ಸಂಪೂರ್ಣವಾಗಿ ನಾಶಪಡಿಸಿತು.

ಮೆಲಿಟಿನ್ ಮತ್ತು ಕೀಮೋಥೆರಪಿಯ ಸಂಯೋಜನೆ

ಟ್ರಿಪಲ್-ನೆಗೆಟಿವ್ ಸ್ತನ ಕ್ಯಾನ್ಸರ್‌ನಂತಹ ಆಕ್ರಮಣಕಾರಿ ರೀತಿಯ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾದ ಡೋಸೆಟಾಕ್ಸೆಲ್‌ನಂತಹ ಸಣ್ಣ ಅಣುಗಳು ಅಥವಾ ಕಿಮೊಥೆರಪಿಯೊಂದಿಗೆ ಮೆಲಿಟಿನ್ ಅನ್ನು ಬಳಸಬಹುದು. ಮೆಲಿಟಿನ್ ಮತ್ತು ಡೋಸೆಟಾಕ್ಸೆಲ್ ಸಂಯೋಜನೆಯು ಇಲಿಗಳಲ್ಲಿನ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯಲ್ಲಿ ಗಮನಾರ್ಹವಾದ ಕಡಿತವನ್ನು ತೋರಿಸಿದೆ. ಈ ಫಲಿತಾಂಶಗಳು ಕ್ಯಾನ್ಸರ್‌ ರೋಗಿಗಳಲ್ಲಿ ಭರವಸೆ ತುಂಬಿವೆ.

ಆದರೆ ಮೆಲಿಟಿನ್‌ ಅನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಬಳಸಬೇಕು. ಏಕೆಂದರೆ ಇದು ದೇಹದಲ್ಲಿ ನೋವು, ಊತ ಮತ್ತು ಅಲರ್ಜಿಯ ಪ್ರತಿಕ್ರಿಯೆಗಳನ್ನು ಸಹ ಪ್ರಚೋದಿಸುತ್ತದೆ. ಆದಾಗ್ಯೂ ಜೇನುನೊಣದ ವಿಷದ ವ್ಯಾಪಕ ಬಳಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನನು ಖಚಿತಪಡಿಸಿಕೊಳ್ಳಲು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...