HomeKarnatakaರಾಜ್ಯದ ಶಾಲಾ ಮಕ್ಕಳು, ಶಿಕ್ಷಕರಿಗೆ ಭರ್ಜರಿ ಸುದ್ದಿ: ಅ. 3ರಿಂದ ದಸರಾ ರಜೆ

ರಾಜ್ಯದ ಶಾಲಾ ಮಕ್ಕಳು, ಶಿಕ್ಷಕರಿಗೆ ಭರ್ಜರಿ ಸುದ್ದಿ: ಅ. 3ರಿಂದ ದಸರಾ ರಜೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಅಕ್ಟೋಬರ್ 3ರಿಂದ 20ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದೆ. ಇಡೀ ರಾಜ್ಯದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಲಾಗಿದೆ.

ಈ ಹಿಂದೆ ಕರಾವಳಿ ಭಾಗದಲ್ಲಿ ದಸರಾ ರಜೆಯಲ್ಲಿ ಸ್ವಲ್ಪ ಮಾರ್ಪಾಡು ಆಗುತ್ತಿತ್ತು. ಈ ಬಾರಿ ಯಾವುದೇ ಮಾರ್ಪಾಡು ಮಾಡದೆ ಇಡೀ ರಾಜ್ಯದ ಎಲ್ಲಾ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಲಾಗಿದೆ.

ಅಕ್ಟೋಬರ್ 3ರಿಂದ 20ರವರೆಗೆ 15 ದಿನಗಳ ಕಾಲ ದಸರಾ ರಜೆ ಇರಲಿದೆ. ಅಕ್ಟೋಬರ್ 21ರಿಂದ 2025 ಏಪ್ರಿಲ್ 10ವರೆಗೆ ಶೈಕ್ಷಣಿಕ ವರ್ಷದ ಎರಡನೇ ಅವಧಿ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024 -25ನೇ ಶೈಕ್ಷಣಿಕ ವರ್ಷದ ಶಾಲಾ ಅವಧಿ ಮಾರ್ಗದರ್ಶಿಯನ್ನು ಶಿಕ್ಷಣ ಇಲಾಖೆ ಶಾಲೆಗಳ ಆರಂಭಕ್ಕೂ ಮೊದಲೇ ಹೊರಡಿಸಿತ್ತು. ಅದರ ಅನುಸಾರ ರಜೆಗಳು ಘೋಷಣೆಯಾಗಿದ್ದು, ಅಕ್ಟೋಬರ್ ನಲ್ಲಿ 11 ದಿನಗಳು ಮಾತ್ರ ತರಗತಿಗಳು ನಡೆಯಲಿವೆ. 17 ದಿನ ದಸರಾ ರಜೆ ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular