2021-22ಕ್ಕೆ ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ, ಕಾಂಡೋಮ್ ಬಳಕೆಯಲ್ಲಿ ದಾದ್ರಾ ಮತ್ತು ನಗರ್ ಹವೇಲಿ ಅಗ್ರಸ್ಥಾನದಲ್ಲಿದೆ. ಇಲ್ಲಿ ಪ್ರತಿ 10,000 ದಂಪತಿಗಳಲ್ಲಿ ಸರಿಸುಮಾರು 993 ದಂಪತಿಗಳು ಲೈಂಗಿಕ ಸಂಬಂಧಗಳ ಸಮಯದಲ್ಲಿ ಕಾಂಡೋಮ್ ಗಳನ್ನು ಬಳಸುತ್ತಾರೆ. ಆಂಧ್ರಪ್ರದೇಶ ನಂತರದ ಸ್ಥಾನದಲ್ಲಿದ್ದು ಅಲ್ಲಿ 10,000 ದಂಪತಿಗಳಲ್ಲಿ 978 ದಂಪತಿಗಳು ಕಾಂಡೋಮ್‌ಗಳನ್ನು ಬಳಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ.
ಇತರೆ ರಾಜ್ಯಗಳ ಸ್ಥಿತಿ
ಕರ್ನಾಟಕವು 10,000 ಜೋಡಿಗಳಲ್ಲಿ ಕೇವಲ 307 ಜೋಡಿ ಕಾಂಡೋಮ್‌ಗಳನ್ನು ಬಳಸುತ್ತಿದ್ದು ರಾಜ್ಯದಲ್ಲಿನ ಜಾಗೃತಿ ಶಿಕ್ಷಣ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತೋರಿಸುತ್ತಿದೆ. ರಾಜ್ಯದಲ್ಲಿ 6% ಜನಸಂಖ್ಯೆಗೆ ಕಾಂಡೋಮ್‌ಗಳ ಬಗ್ಗೆ ತಿಳಿದೇ ಇಲ್ಲ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.
ವಾರ್ಷಿಕ ಕಾಂಡೋಮ್ ಬಳಕೆ
ಭಾರತವು ಪ್ರತಿ ವರ್ಷ ಸರಾಸರಿ 3.307 ಬಿಲಿಯನ್ ಕಾಂಡೋಮ್‌ಗಳನ್ನು ಖರೀದಿಸುತ್ತದೆ. ಉತ್ತರ ಪ್ರದೇಶವು ಸುಮಾರು 530 ಮಿಲಿಯನ್ ಬಳಸುತ್ತದೆ. ಆದಾಗ್ಯೂ ಇತ್ತೀಚಿನ ಸಮೀಕ್ಷೆಗಳು ಬಳಕೆಯಲ್ಲಿ ಕುಸಿತವನ್ನು ಸೂಚಿಸುತ್ತವೆ. ಪುದುಚೇರಿ 960, ಪಂಜಾಬ್ 895, ಚಂಡೀಗಢ 822, ಹರಿಯಾಣ 685, ಹಿಮಾಚಲ ಪ್ರದೇಶ 567, ರಾಜಸ್ಥಾನ 514 ಮತ್ತು ಗುಜರಾತ್ 430 ದಂಪತಿಗಳು ಕಾಂಡೋಮ್ ಬಳಸುತ್ತಿದ್ದಾರೆ.
ಈ ವರದಿಯು ದೇಶದಲ್ಲಿ ಕಾಂಡೋಮ್ ಬಳಕೆ ಮತ್ತು ಲೈಂಗಿಕ ಆರೋಗ್ಯ ಜಾಗೃತಿಯನ್ನು ಉತ್ತೇಜಿಸಲು ನಿರಂತರ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳುತ್ತದೆ.