BIG NEWS: ಅಕ್ಕಿ, ಭತ್ತ ದಾಸ್ತಾನು ಮಾಡುವ ವ್ಯಾಪಾರಿಗಳ ಮೇಲೆ ಹದ್ದಿನ ಕಣ್ಣು: ಪ್ರತಿ ವಾರ ಸ್ಟಾಕ್ ವಿವರ ಘೋಷಿಸಲು ಸೂಚನೆ

ಅಕ್ಕಿ, ಭತ್ತ ವ್ಯಾಪಾರಿಗಳು ವೆಬ್ ಪೋರ್ಟಲ್‍ನಲ್ಲಿ ನೋಂದಣಿಯಾಗಿ ಅಕ್ಕಿ ದಾಸ್ತಾನು ವಿವರ ದಾಖಲಿಸಲು ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರವು ಅಕ್ಕಿ, ಭತ್ತದ ಘಟಕಗಳ ವ್ಯಾಪಾರಿಗಳು, ಸಗಟು ವ್ಯಾಪಾರಿ, ಚಿಲ್ಲರೆ ವ್ಯಾಪಾರಿ, ಬಿಗ್ ಚೈನ್ ರೀಟೇಲರ್, ಬ್ರೋಕನ್ ರೈಸ್, ನಾನ್-ಬಾಸ್ಮತಿ ವೈಟ್, ಪರ್ಬಾಯಿಲ್ಡ್, ಬಾಸ್ಮತಿ ಅಕ್ಕಿ ಹಾಗೂ ಭತ್ತ ದಾಸ್ತಾನು ಬಗ್ಗೆ ಕೇಂದ್ರ ಸರ್ಕಾರದ ವೆಬ್ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು. ಪ್ರತಿ ಶುಕ್ರವಾರ ಅಕ್ಕಿ, ಭತ್ತದ ದಾಸ್ತಾನನ್ನು ವೆಬ್ ಪೋರ್ಟಲ್  https://eve oils.nic.in/login.html ಮೂಲಕ ಘೋಷಿಸಿಕೊಳ್ಳಲು ತಿಳಿಸಲಾಗಿದೆ.

ನೋಂದಣಿ ಮತ್ತು ದಾಸ್ತಾನು ಘೋಷಣೆ ಸಂಬಂಧ ಸೃಷ್ಟೀಕರಣ, ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರದ ಇ-ಮೇಲ್  wheatstock-fpd@gov.in ಅನ್ನು ಸಂಪರ್ಕಿಸಲು ತಿಳಿಸಿದೆ.

ಜಿಲ್ಲಾ ಹಂತದಲ್ಲಿ ನೋಂದಣಿ ಮತ್ತು ದಾಸ್ತಾನು ಘೋಷಣೆಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ವಸಂತ್ ಕುಮಾರ್ ಎಸ್.ಜಿ. ದೂ.ಸಂ; 9986212164 ಗೆ ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸಿದ್ರಾಮ್ ಮರಿಹಾಳ್  ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read