ಅಮೆರಿಕ ನಿಯೋಜಿತ ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಲೆಬನಾನ್ ಮೇಲೆ ಮಂಗಳವಾರ ದಾಳಿ ನಡೆಸಲಾಗಿದ್ದು, 9 ಮಂದಿ ಮೃತಪಟ್ಟು, 2,750 ಜನರು ಗಾಯಗೊಂಡಿದ್ದಾರೆ.
ಲೆಬನಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಲೆಬನಾನ್ ನಲ್ಲಿ ಪೇಜರ್ ಬಾಂಬ್ ಸ್ಫೋಟದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 2,750 ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಲೆಬನಾನ್ ನಲ್ಲಿರುವ ಇರಾನ್ ರಾಯಭಾರಿ ಕೂಡ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಗೆ ಇಸ್ರೇಲ್ ಕಾರಣ ಎಂದು ಹಿಜ್ಬುಲ್ಲಾ ಆರೋಪಿಸಿದೆ.
ಹಿಜ್ಬುಲ್ಲಾ ಲೆಬನಾನ್ ನಲ್ಲಿ ರಾಜಕೀಯ ಮತ್ತು ಮಿಲಿಟರಿ ಶಕ್ತಿಯಾಗಿದ್ದು, ಇರಾನ್ ಬೆಂಬಲಿಸುತ್ತದೆ. ಅಕ್ಟೋಬರ್ 2023 ರಿಂದ ಗಾಝಾದಲ್ಲಿ ಇಸ್ರೇಲ್ನೊಂದಿಗೆ ಯುದ್ಧ ನಡೆಸುತ್ತಿರುವ ಹಮಾಸ್ ಅನ್ನು ಹಿಜ್ಬುಲ್ಲಾ ಬೆಂಬಲಿಸುತ್ತದೆ. ಹಿಜ್ಬುಲ್ಲಾವನ್ನು ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಎರಡೂ ನಿಷೇಧಿಸಿವೆ.ಲೆಬನಾನ್ ನಲ್ಲಿರುವ ಹಿಜ್ಬುಲ್ಲಾದ ಭದ್ರಕೋಟೆಗಳ ಮೇಲೆ ಈ ದಾಳಿಯಿಂದ ಪರಿಣಾಮ ಬೀರಿದೆ. ಎಎಫ್ಪಿ ಪ್ರಕಾರ, ಹಿಜ್ಬುಲ್ಲಾ ತನ್ನದೇ ಆದ ದೂರಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ ಮತ್ತು ಗಾಜಾ ಯುದ್ಧ ಪ್ರಾರಂಭವಾದ ನಂತರ ಮೊಬೈಲ್ ಫೋನ್ಗಳನ್ನು ಬಳಸದಂತೆ ತನ್ನ ಸದಸ್ಯರಿಗೆ ಎಚ್ಚರಿಕೆ ನೀಡಿದೆ.