HomeKarnatakaBREAKING NEWS: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮತ್ತೊಮ್ಮೆ CCB ದಾಳಿ: ಮೊಬೈಲ್, ಡ್ರಗ್ಸ್, ಹಣ...

BREAKING NEWS: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮತ್ತೊಮ್ಮೆ CCB ದಾಳಿ: ಮೊಬೈಲ್, ಡ್ರಗ್ಸ್, ಹಣ ಜಪ್ತಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ಮತ್ತೆ ದಾಳಿ ನಡೆಸಿದ್ದಾರೆ. ಈ ವೇಳೆ ಬಂಧಿತ ರೌಡಿ ಶೀಟರ್ ವಿಲ್ಸನ್ ಗಾರ್ಡ ನಾಗ ಹಾಗೂ ಆತನ ಸಹಚರರ ಬಳಿ ಇದ್ದ ಮೊಬೈಲ್ ಫೋನ್, ಡ್ರಗ್ಸ್, ಹಣವನ್ನು ವಶಕ್ಕೆ ಪಡೆಯಲಾಗಿದೆ.

ರೌಡಿ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿದ್ದುಕೊಂಡೇ ಧಮ್ಕಿ ಹಾಕುತ್ತಿದ್ದ. ಇದೇ ಕಾರಣಕ್ಕೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ವಿಲ್ಸನ್ ಗಾರ್ಡನ್ ನಾಗ ಹಾಗೂ ಆತನ ಸಹಚರರ ಬಳಿ ಇದ್ದ 18 ಮೊಬೈಲ್ ಫೋನ್, ಡ್ರಗ್ಸ್, ಹಣವನ್ನು ಜಪ್ತಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಜೊತೆಯೂ ವಿಲ್ಸನ್ ಗಾರ್ಡನ್ ನಾಗ ಕಾಣಿಸಿಕೊಂಡಿದ್ದ. ದರ್ಶನ್ ಹಾಗೂ ರೌಡಿ ನಾಗ ಇಬ್ಬರೂ ಜೈಲಿನಲ್ಲಿಯೇ ರಾಜಾತಿಥ್ಯ ಪಡೆದಿದ್ದರು. ಇದೇ ಕಾರಣಕ್ಕೆ ನಟ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular