2016ರಲ್ಲಿ ತೆರೆ ಕಂಡಿದ್ದ ಕನ್ನಡದ ಯು ಟರ್ನ್ ರಿಮೇಕ್ ಆದ ಸಮಂತಾ ನಟನೆಯ ‘ಯು ಟರ್ನ್’ ಚಿತ್ರ 2018 ರಲ್ಲಿ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ಟಾಲಿವುಡ್ ಮತ್ತು ಕಾಲಿವುಡ್ ನಲ್ಲೂ ಪ್ರೇಕ್ಷಕರ ಮನ ಸೆಳೆದಿತ್ತು ಇಂದಿಗೆ ಈ ಸಿನಿಮಾ ಬಿಡುಗಡೆಯಾಗಿ ಆರು ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಸ್ಯಾಂಡಲ್ವುಡ್ ನಿರ್ದೇಶಕ ಪವನ್ ಕುಮಾರ್ ಅವರೇ ನಿರ್ದೇಶಿಸಿದ್ದು, ಭೂಮಿಕಾ ಚಾವ್ಲಾ, ಆದಿ ಪಿನಿಸೆಟ್ಟಿ, ರಾಹುಲ್ ರವೀಂದ್ರನ್, ನರೈನ್, ಆಡುಕಲಂ ನರೇನ್, ರವಿಪ್ರಕಾಶ್, ಹರಿ ತೇಜ, ನಾಗಭೂಷಣ, ಛತ್ರಪತಿ ಶೇಖರ್, ರಾಜಶ್ರೀ, ತೆರೆ ಹಂಚಿಕೊಂಡಿದ್ದಾರೆ. BR8 ಕ್ರಿಯೇಷನ್ಸ್, ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಲ್ಲಿ ಶ್ರೀನಿವಾಸ ಚಿಟ್ಟೂರಿ ಹಾಗೂ ರಾಮ್ ಬಾಬು ನಿರ್ಮಾಣ ಮಾಡಿದ್ದು, ಸುರೇಶ್ ಆರುಮುಗಂ ಸಂಕಲನ, ಹಾಗೂ ನಿಕೇತ್ ಬೊಮ್ಮಿರೆಡ್ಡಿ ಛಾಯಾಗ್ರಹಣವಿದೆ. ಅನಿರುದ್ಧ ರವಿಚಂದರ್ ಹಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದಾರೆ.