ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಸಣ್ಣ ಝರಿಯಲ್ಲಿ ಈಜು ಹೊಡೆಯುತ್ತಾ ಸಂಭ್ರಮಿಸುತ್ತಿದ್ದ ವ್ಯಕ್ತಿಯೊಬ್ಬ ಪುಟ್ಟ ನೀರಿನ ಕೊಳಕ್ಕೆ ಧುಮುಕಿದ ನಂತರ ನಾಪತ್ತೆಯಾದ ಘಟನೆಯ ದೃಶ್ಯ ಆತಂಕ ಮೂಡಿಸಿದೆ.
ಅಪರಿಚಿತ ವ್ಯಕ್ತಿಯು ಜಲಪಾತದ ಪಕ್ಕದಲ್ಲಿರುವ ಕೊಳಕ್ಕೆ ಬಂಡೆ ಮೇಲಿಂದ ಧುಮುಕಿದ್ದಾನೆ, ಆದರೆ ನಂತರ ಆತ ಮೇಲೆ ಬರಲೇ ಇಲ್ಲ. ಕೊಳದ ಸುತ್ತ ಇದ್ದವರು ಅವನಿಗಾಗಿ ಸುತ್ತ ನಿಂತು ನೋಡಿದರೂ ಆತ ಕಾಣಿಸಿಕೊಳ್ಳಲೇ ಇಲ್ಲ. ವೈರಲ್ ವಿಡಿಯೋದಲ್ಲಿ ಲಕ್ಷಾಂತರ ಜನರು ಅವನು ಎಲ್ಲಿಗೆ ಹೋದ ಎಂದು ಪ್ರಶ್ನಿಸುತ್ತಿದ್ದಾರೆ. ಅಸಂಖ್ಯಾತ ವೀಕ್ಷಕರು ಆ ವ್ಯಕ್ತಿಗೆ ಏನಾಯಿತು ಎಂಬುದರ ಕುರಿತು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಘಟನೆ ಸಂಭವಿಸಿರುವುದು ಎಲ್ಲಿ? ಆ ವ್ಯಕ್ತಿ ಯಾರು? ಕೊಳದಿಂದ ಹೊರಗೆ ಬಂದರಾ ಅಥವಾ ಘಟನೆ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿದೆಯಾ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ.
https://twitter.com/PicturesFoIder/status/1832726602150518785?ref_src=twsrc%5Etfw%7Ctwcamp%5Etweetembed%7Ctwterm%5E1832726602150518785%7Ctwgr%5E58604241d77adb9c6bd0873a2972a