ಶಾಸಕನ ಬೆಂಬಲಿಗನಿಂದ ಹಾಡಹಗಲೇ ಗೂಂಡಾಗಿರಿ; ವಿಡಿಯೋ ಹಂಚಿಕೊಂಡ ಉದ್ಧವ್ ಠಾಕ್ರೆ 13-09-2024 10:11AM IST / No Comments / Posted In: Latest News, India, Live News ಮಹಾರಾಷ್ಟ್ರ – ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರು ಕಳೆದ ಕೆಲವು ದಿನಗಳಿಂದ ಮಹಾಯುತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಈ ನಡುವೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕ ಮಹೇಂದ್ರ ಥೋರ್ವ್ ಅವರ ಅಂಗರಕ್ಷಕ ವ್ಯಕ್ತಿಯೊಬ್ಬರನ್ನು ಸಾರ್ವಜನಿಕವಾಗಿ ಥಳಿಸುತ್ತಿರುವ ಘಟನೆ ನಡೆದಿದೆ. ಈ ವಿಡಿಯೋ ಹಂಚಿಕೊಡಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬಣ ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. ಶಾಸಕ ಮಹೇಂದ್ರ ಥೋರ್ವ್ ಅವರ ಅಂಗರಕ್ಷಕ ನೇರಲ್‌ನಲ್ಲಿ ಹಗಲು ಹೊತ್ತಿನಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, “ಮಹಾರಾಷ್ಟ್ರದಲ್ಲಿ ದರೋಡೆಕೋರರು! ಶಾಸಕ ಮಹೇಂದ್ರ ಥೋರ್ವೆ ಅವರ ಅಂಗರಕ್ಷಕ ಶಿವ ಎಂಬಾತ ನೇರಲ್‌ನಲ್ಲಿ ಹಗಲುವೇಳೆಯೇ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದನು. ಆ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳು ಅಳುತ್ತಿದ್ದರು. ಆದರೆ ಸಹಾಯಕ್ಕೆ ಬರಲು ಯಾರೂ ಧೈರ್ಯ ಮಾಡಲಿಲ್ಲ… ಕಾನೂನು ಸುವ್ಯವಸ್ಥೆ ಬೂದಿಯಾಗಿದೆ. ರಾಜ್ಯಾದ್ಯಂತ ಗೂಂಡಾಗಿರಿ ಹೆಚ್ಚಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗಾಗಿ ಕಾಯಲಾಗುತ್ತಿದೆ” ಎಂದು ಟೀಕಿಸಿದ್ದಾರೆ. ಈ ಘಟನೆಯ ಬಗ್ಗೆ ಸರ್ಕಾರ ಅಥವಾ ಪೊಲೀಸರಿಂದ ಇದುವರೆಗೆ ಯಾರೂ ಪ್ರತಿಕ್ರಿಯೆ ನೀಡಿಲ್ಲ. ವೀಡಿಯೊದಲ್ಲಿ, ಶಿವಸೇನೆ (ಯುಬಿಟಿ) ಮುಖಂಡ ಕಾರ್ ಡ್ರೈವರ್‌ಗೆ ರಾಡ್‌ನಿಂದ ಹೊಡೆಯುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ರಸ್ತೆ ಮಧ್ಯದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಸಹಾಯಕ್ಕಾಗಿ ಅಳುವುದನ್ನು ಸಹ ಕೇಳಬಹುದು. महाराष्ट्रात गुंडाराज! मिंधेंच्या आमदाराच्या, महेंद्र थोरवे ह्यांच्या 'शिवा' नावाच्या बॉडीगार्डने नेरळ येथे भर दिवसा, भर रस्त्यात एका व्यक्तीला मारहाण केली. त्या व्यक्तीची बायका मुलं रडत होती, पण कोणी मदतीला यायची हिम्मत केली नाही… कायद्याच्या चिंधड्या, लोकांचे हाल! ही फक्त… pic.twitter.com/n0QX7Pp92x — ShivSena – शिवसेना Uddhav Balasaheb Thackeray (@ShivSenaUBT_) September 11, 2024