SHOCKING: ಆರ್ಕೆಸ್ಟ್ರಾ ಡ್ಯಾನ್ಸರ್ ಗಳನ್ನು ಅಪಹರಿಸಿ ಗನ್ ಪಾಯಿಂಟ್ ನಲ್ಲಿ ಗ್ಯಾಂಗ್ ರೇಪ್

ಗೋರಖ್‌ಪುರ: ಕುಶಿನಗರ ಜಿಲ್ಲೆಯ ರಾಮ್‌ಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಇಬ್ಬರು ಆರ್ಕೆಸ್ಟ್ರಾ ಡ್ಯಾನ್ಸರ್‌ಗಳನ್ನು ಅಪಹರಿಸಿ ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಎರಡು ಗಂಟೆಯೊಳಗೆ ಸಂತ್ರಸ್ತರನ್ನು ರಕ್ಷಿಸಿದ್ದು, ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಶಿನಗರ ಎಸ್ಪಿ ಸಂತೋಷ್ ಕುಮಾರ್ ಮಿಶ್ರಾ ಪ್ರಕಾರ, ಆರೋಪಿಗಳು ಎರಡು ಎಸ್.ಯು.ವಿ.ಗಳಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಮಹಿಳೆಯರನ್ನು ಕಪ್ತಂಗಂಜ್ ಪ್ರದೇಶದ ಸೊಹಾನಿ ಗ್ರಾಮಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಸುಳಿವಿನ ಮೇರೆಗೆ, ಪೊಲೀಸರು ಕಾರ್ಯಾಚರಣೆ ನಡೆಸಿ ಡ್ಯಾನ್ಸರ್ ಗಳನ್ನು ರಕ್ಷಿಸಿದ್ದಾರೆ. ಆರು ಶಂಕಿತರನ್ನು ಮೊದಲಿಗೆ ಬಂಧಿಸಿದ್ದು, ನಂತರ ಇಬ್ಬರನ್ನು ಬಂಧಿಸಲಾಗಿದೆ.

ಆಘಾತಕಾರಿ ಸಂಗತಿಯೆಂದರೆ, ಕೆಲವು ಆರೋಪಿಗಳು ಉತ್ತಮ ಗೌರವಾನ್ವಿತ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಎರಡು ಎಸ್‌ಯುವಿಗಳು, ಮೋಟಾರ್‌ಸೈಕಲ್, 12-ಬೋರ್ ಪಂಪ್-ಆಕ್ಷನ್ ಗನ್, ನಾಲ್ಕು .32-ಬೋರ್ ಪಿಸ್ತೂಲ್‌ಗಳು, 10 ಬಳಸಿದ ಕಾರ್ಟ್ರಿಡ್ಜ್‌ ಗಳು, 12 ಲೈವ್ ಬುಲೆಟ್‌ಗಳು, 11 ಮೊಬೈಲ್ ಫೋನ್‌ಗಳು, 63,600 ರೂಪಾಯಿ ನಗದು ಮತ್ತು ಆರು ಎಟಿಎಂ ಕಾರ್ಡ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕುಶಿನಗರ ಎಸ್ಪಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read