ಸೆಪ್ಟೆಂಬರ್ 27ರಂದು ಬಿಡುಗಡೆಗೆ ಸಿದ್ಧವಾಗಿದೆ ‘ಸಂಜು’ 07-09-2024 6:44PM IST / No Comments / Posted In: Featured News, Live News, Entertainment ಯತಿರಾಜ್ ನಿರ್ದೇಶನದ ಮನ್ವಿತ್ ಅಭಿನಯದ ಬಹುನಿರೀಕ್ಷಿತ ‘ಸಂಜು’ ಚಿತ್ರ ಈಗಾಗಲೇ ತನ್ನ ರೊಮ್ಯಾಂಟಿಕ್ ಹಾಡುಗಳ ಮೂಲಕವೇ ಗಾನಪ್ರಿಯರ ಗಮನ ಸೆಳೆದಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಇದೆ ಸೆಪ್ಟೆಂಬರ್ 27ರಂದು ರಾಜ್ಯದ್ಯಂತ ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರವನ್ನು ದಿಶಾ ಎಂಟರ್ಪ್ರೈಸಸ್ ಬ್ಯಾನರ್ ನಡಿ ಸಂತೋಷ್ ಡಿಂಕ ಮಹದೇವಪ್ಪ ನಿರ್ಮಾಣ ಮಾಡಿದ್ದು, ಮನ್ವಿತ್, ಶ್ರಾವ್ಯ ಹಾಗೂ ಸಂಗೀತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಹರಿತ್ಸ ಸಂಗೀತ ಸಂಯೋಜನೆ ನೀಡಿದ್ದು, ಸಂಜೀವ್ ರೆಡ್ಡಿ ಸಂಕಲನ, ವಿದ್ಯಾ ನಾಗೇಶ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಾಗೂ ಮದನ್ ಮತ್ತು ಹರಿಣಿ ಅವರ ನೃತ್ಯ ನಿರ್ದೇಶನವಿದೆ.