ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ʻಶಭ್ಬಾಷ್ʼ ಚಿತ್ರತಂಡ

ರುದ್ರ ಶಿವ ನಿರ್ದೇಶನದ ಶರತ್ ಅಭಿನಯದ ಬಹು ನಿರೀಕ್ಷಿತ ʻಶಭ್ಬಾಷ್ʼ ಚಿತ್ರ ಇತ್ತೀಚಿಗಷ್ಟೇ ‘ಬಗಣಿ ಗೂಟ’ ಎಂಬ ಹಾಡಿನ ಮೂಲಕ ಭರ್ಜರಿ ಸೌಂಡ್ ಮಾಡಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಚಿತ್ರ ತಂಡ ಇಂದು ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು ace  22 ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪವೀಂದ್ರ ಮುತ್ತಪ್ಪ ನಿರ್ಮಾಣ ಮಾಡಿದ್ದು, ಶರತ್ ಗೆ ಜೋಡಿಯಾಗಿ ನಿಸರ್ಗ ಅಭಿನಯಿಸಿದ್ದಾರೆ. ಇನ್ನುಳಿದಂತೆ ನಾಗಾಭರಣ, ಪದ್ಮಜಾರಾವ್, ಜಗಪ್ಪ, ಮಂಜು ಪಾವಗಡ, ಹರಿಣಿ ಶ್ರೀಕಾಂತ್, ಸುಶ್ಮಿತಾ, ರಘುರಾಜ್ ಮಲ್ನಾಡ್, ಪೆಟ್ರೋಲ್ ಪ್ರಸನ್ನ, ಕೋಟೆ ಪ್ರಭಾಕರ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ನರಸಿಂಹ ಹಾಗೂ ಚಂದ್ರ ಬಂಡೆ ಅವರ ಸಾಹಸ ನಿರ್ದೇಶನ, ರುದ್ರಶಿವ  ಸಂಭಾಷಣೆ, ಹಾಗೂ ಕೆಎಂ ಪ್ರಕಾಶ್ ಸಂಕಲನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read