HomeEntertainmentಗಾನಪ್ರಿಯರ ಗಮನ ಸೆಳೆದ 'ಮಾರ್ಟಿನ್' ಚಿತ್ರದ ಮೊದಲ ಹಾಡು

ಗಾನಪ್ರಿಯರ ಗಮನ ಸೆಳೆದ ‘ಮಾರ್ಟಿನ್’ ಚಿತ್ರದ ಮೊದಲ ಹಾಡು

ಎಪಿ ಅರ್ಜುನ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಮಾರ್ಟಿನ್’ ತನ್ನ ಟೀಸರ್ ಹಾಗೂ ಟ್ರೈಲರ್ ಇಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಇದರ ಮೊದಲ ಹಾಡು ಇಂದು ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ”ಜೀವ ನೀನೆ” ಎಂಬ ಈ ಮೆಲೋಡಿ ಈ ಹಾಡಿಗೆ ಸೋನು ನಿಗಮ್ ಮತ್ತು ಶ್ರುತಿಕಾ ಸಮುದ್ರಲಾ ಧ್ವನಿಯಾಗಿದ್ದು, ಮಣಿ ಶರ್ಮ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಎಪಿ ಅರ್ಜುನ್ ಸಾಹಿತ್ಯವಿದೆ.

ಈ ಚಿತ್ರವನ್ನು ವಾಸವಿ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ಉದಯ್ ಕೆ ಮೆಹ್ತಾ ಮತ್ತು ಸೂರಜ್ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದು, ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ  ವೈಭವಿ ಶಾಂಡಿಲ್ಯ ಅಭಿನಯಿಸಿದ್ದಾರೆ. ಅನ್ವೇಶಿ ಜೈನ್, ಜಾರ್ಜಿಯಾ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಸುಕೃತಾ ವಾಗ್ಲೆ, ನಿಕಿತಿನ್ ಧೀರ್, ನವಾಬ್ ಷಾ, ರೋಹಿತ್ ಪಾಠಕ್, ನಾಥನ್ ಜೋನ್ಸ್,  ಉಳಿದ ಪಾತ್ರವರ್ಗದಲ್ಲಿದ್ದಾರೆ. ಕೆ ಎಂ ಪ್ರಕಾಶ್ ಹಾಗೂ ಎಂ ಎಸ್ ರೆಡ್ಡಿ ಸಂಕಲನ, ಗೋಪಿನಾಥ್ ಕೃಷ್ಣಮೂರ್ತಿ  ಸಂಭಾಷಣೆ, ರಾಮ್ ಲಕ್ಷ್ಮಣ್, ಡಾ ಕೆ ರವಿವರ್ಮ, ಗಣೇಶ್, ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ, ಇಮ್ರಾನ್ ಸರ್ಧಾರಿಯಾ, ಮತ್ತು ವಿ ಮುರಳಿ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular