HomeEntertainmentಸೆಪ್ಟೆಂಬರ್ ಆರರಂದು ಬಿಡುಗಡೆಗೆ ಸಿದ್ಧವಾಗಿದೆ 'ಅನ್ನ'

ಸೆಪ್ಟೆಂಬರ್ ಆರರಂದು ಬಿಡುಗಡೆಗೆ ಸಿದ್ಧವಾಗಿದೆ ‘ಅನ್ನ’

ಇಸ್ಲಾಹುದ್ದೀನ್ ಎನ್ಎಸ್ ನಿರ್ದೇಶನ ಬಹು ನಿರೀಕ್ಷಿತ ‘ಅನ್ನ’ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿದ್ದು, ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು, ಈ ಸಿನಿಮಾ ಇದೆ ಸೆಪ್ಟೆಂಬರ್ 6 ರಂದು ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಅನ್ನಕ್ಕಾಗಿ ಪರದಾಡುವುದರ ಕುರಿತ ಕಥೆಯೇ ಇದಾಗಿದ್ದು, ಗಗನ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಬಸವರಾಜ್ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಂದನ್ ಜಿಎಂ ಸೇರಿದಂತೆ ಪದ್ಮಶ್ರೀ ಸಿಆರ್, ಡಾ. ಭುವನ ಮೈಸೂರು, ಸಂಪತ್ ಮೈತ್ರೇಯ, ಬಾಲ ರಾಜವಾಡಿ, ರಮೇಶ್ ಎಸ್ಪಿ, ನಾಗಶ್ರೀ ಸಿ.ಎಂ. ತಾರಾ ಬಳಗದಲ್ಲಿದ್ದಾರೆ.ಗುರುಸ್ವಾಮಿ ಟಿ ಸಂಕಲನ, ಬಿ.ಎನ್.ಸಿದ್ದು ಪ್ರಸನ್ನ ಸಂಭಾಷಣೆ, ಕಾತ್ಯಾಯಿನಿ ಯಶೋಮಿತ್ರ, ಹಾಗೂ ಡಾ. ಪ್ರಯಾಗ್ ಎಚ್.ಎಸ್. ವೇಷಭೂಷಣ,ಮಧು ಸುಗತ ಅವರ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular