HomeEntertainmentನಾಳೆ ಬಿಡುಗಡೆಯಾಗಲಿದೆ 'ಜಂಬೂ ಸರ್ಕಸ್' ಚಿತ್ರದ ಟ್ರೈಲರ್

ನಾಳೆ ಬಿಡುಗಡೆಯಾಗಲಿದೆ ‘ಜಂಬೂ ಸರ್ಕಸ್’ ಚಿತ್ರದ ಟ್ರೈಲರ್

ಪ್ರವೀಣ್ ತೇಜ್ ಅಭಿನಯದ ಎಂ ಡಿ ಶ್ರೀಧರ್ ನಿರ್ದೇಶನದ ‘ಜಂಬೂ ಸರ್ಕಸ್’ ಚಿತ್ರ ಇತ್ತೀಚಿಗಷ್ಟೇ ತನ್ನ ಮೆಲೋಡಿ ಹಾಡಿನಿಂದಲೇ ಎಲ್ಲರ ಗಮನ ಸೆಳೆದಿದ್ದು, ಇನ್ನೇನು ತೆರೆ ಮೇಲೆ ಬರಲು ಸಿದ್ಧವಾಗಿದೆ. ಇದರ ಟ್ರೈಲರ್, ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದರ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು ಶ್ರೀ ಮಹತಿ ಕಂಬೈನ್ಸ್ ಬ್ಯಾನರ್ ನಲ್ಲಿ ಎಚ್ ಸಿ ಸುರೇಶ್ ನಿರ್ಮಾಣ ಮಾಡಿದ್ದು, ಪ್ರವೀಣ್ ತೇಜ್ ಹಾಗೂ ಅಂಜಲಿ ಅನೀಶ್ ಪ್ರಮುಖ ಪಾತ್ರದಲ್ಲಿದ್ದಾರೆ, ಇನ್ನುಳಿದಂತೆ ಅವಿನಾಶ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಆಶಾಲತಾ, ಸ್ವಾತಿ, ಲಕ್ಷ್ಮಿ ಸಿಧಹಯ್ಯ, ನಯನಾ, ಜಗಪ್ಪ, ಉಳಿದ ತಾರಾಂಗಣದಲ್ಲಿದ್ದಾರೆ.  ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದು, ಗಣನೇಶ್ ಮಾತಾಡ್ ಸಂಕಲನ, ಎವಿ ಕೃಷ್ಣಕುಮಾರ್ ಛಾಯಾಗ್ರಹಣ, ರಘು ನಿಡವಳ್ಳಿ ಸಂಭಾಷಣೆ, ಡಾ. ರವಿವರ್ಮ  ಸಾಹಸ ನಿರ್ದೇಶನ ಹಾಗೂ ಎ. ಹರ್ಷ ಅವರ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular