alex Certify SHOCKING: ಬಾಯಿಗೆ ಬಟ್ಟೆ ತುರುಕಿ ಶಾಲಾ ಜವಾನನಿಂದ ಅತ್ಯಾಚಾರ: ಗರ್ಭಿಣಿಯಾದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಬಾಯಿಗೆ ಬಟ್ಟೆ ತುರುಕಿ ಶಾಲಾ ಜವಾನನಿಂದ ಅತ್ಯಾಚಾರ: ಗರ್ಭಿಣಿಯಾದ ಬಾಲಕಿ

ಉತ್ತರ ಪ್ರದೇಶದ ಫಾರೂಕಾಬಾದ್ ನಲ್ಲಿ 13 ವರ್ಷದ ಬಾಲಕಿಯ ಮೇಲೆ ಶಾಲಾ ಜವಾನ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ. ಪಾರುಕಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಈ ಪ್ರದೇಶದಲ್ಲಿ 13 ವರ್ಷದ ಬಾಲಕಿಯೊಬ್ಬಳು ಸರ್ಕಾರಿ ಶಾಲೆಯ ಪ್ಯೂನ್‌ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ ಗರ್ಭಿಣಿಯಾಗಿದ್ದಾಳೆ. ಕೆಲವು ತಿಂಗಳ ಹಿಂದೆ ಘಟನೆ ನಡೆದಿದ್ದು, ಕೌನ್ಸಿಲ್ ಶಾಲೆಯ ಪ್ಯೂನ್ ಮತ್ತು ಆ ಸಂದರ್ಭದಲ್ಲಿ ಸಹಾಯ ಮಾಡಿದ ಸಹಚರನ ವಿರುದ್ಧ ಔಪಚಾರಿಕ ದೂರು ದಾಖಲಿಸಲಾಗಿದೆ.

13 ವರ್ಷದ ಬಾಲಕಿಯ ಕುಟುಂಬವು ಮೊಕದ್ದಮೆ ಹೂಡಿದೆ. ರಾತ್ರಿಯಲ್ಲಿ ಬಾತ್ರೂಮ್‌ಗೆ ಹುಡುಗಿ ಹೋಗಿದ್ದಾಗ ಗ್ರಾಮದ ಪಂಕಜ್ ಮತ್ತು ಅಮಿತ್ ಅವಳನ್ನು ಹಿಡಿದು ಖಾಲಿ ಮನೆಗೆ ಕರೆದೊಯ್ದು ಅಲ್ಲಿ ಅಮಿತ್ ಅವಳ ಮೇಲೆ ಅತ್ಯಾಚಾರವೆಸಗಿದರು ಮತ್ತು ಪಂಕಜ್ ಹೊರಗೆ ನಿಂತು ನೋಡುತ್ತಿದ್ದ. ಆರೋಪಿ ಆಕೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಬಾಲಕಿಗೆ ದೂರು ನೀಡಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ ಬಾಲಕಿ ಐದು ತಿಂಗಳ ಗರ್ಭಿಣಿಯಾದಾಗ ಆಕೆಯ ತಾಯಿಗೆ ವಿಷಯ ತಿಳಿಯಿತು. ಅದರ ನಂತರ ತಾಯಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಾಲಕಿಗೆ ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇನ್ನೂ ಯಾರನ್ನೂ ಬಂಧಿಸಿಲ್ಲ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಕೊತ್ವಾಲಿ ಕಾಯಮ್‌ಗಂಜ್ ಪ್ರಭಾರಿ ಇನ್ಸ್‌ ಪೆಕ್ಟರ್ ರಾಮ್ ಅವತಾರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...