ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.ತೀರ್ಥಹಳ್ಳಿ ಸಮೀಪದ ಇಂದಾವರದ ಗ್ರಾಮದ ನಿವಾಸಿ ಜಯದೀಪ್ (24) ಮೃತ ಯುವಕ.
ಈತ ಆನ್ ಲೈನ್ ನಲ್ಲಿ ಹಣ ಹೂಡಿದ್ದನು. ಇದಕ್ಕಾಗಿ ಎಲ್ಲಾ ಕಡೆ ಸಾಲ ಮಾಡಿಕೊಂಡಿದ್ದನು, ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಸಮೀಪದ ತುಂಗಾ ನದಿಯಲ್ಲಿ ಯುವಕನಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ಎಂದು ಸ್ಟೇಟಸ್ ಹಾಕಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವಕನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಮೊಬೈಲ್ ಫೋನ್ ನಲ್ಲಿ ವ್ಯಾಟ್ಸಾಪ್ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದನು. ತುಂಗಾ ನದಿ ಬಳಿ ಈತನ ಬೈಕ್ ಪತ್ತೆಯಾಗಿತ್ತು.ಇತ್ತೀಚೆಗೆ ಆನ್ ಲೈನ್ ಟ್ರೇಡಿಂಗ್, ಬಿಟ್ ಕಾಯಿನ್, ಸೇರಿದಂತೆ ಹಲವು ಆನ್ ಲೈನ್ ಹೂಡಿಕೆ ಮಾಡಿ ಕೆಲವರು ಮೋಸ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ದುಡಿದ ಹಣವನ್ನು ಎಲ್ಲೆಲ್ಲೋ ಹಾಕಿ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಹಲವು ಘಟನೆಗಳು ಬೆಳಕಿಗೆ ಬಂದಿದೆ.