ಮಹಾರಾಜ ಟ್ರೋಫಿ; ಇಂದು ಮೊದಲ ಸೆಮಿ ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗ ಮೈಸ್ಟಿಕ್ಸ್

ಈ ಬಾರಿಯ ಮಹಾರಾಜ ಟ್ರೋಫಿಯ ಪಂದ್ಯಗಳು ಹೊಸ ದಾಖಲೆಗಳನ್ನು ಬರೆದಿದ್ದು, ಮೂರು ಸೂಪರ್ ಓವರ್ ನಡೆದ ಪಂದ್ಯವಂತೂ ಹೊಸ ಇತಿಹಾಸ ಸೃಷ್ಟಿಸಿದೆ. ಎಲ್ಲಾ ಪಂದ್ಯಗಳು ಸಹ ರೋಚಕತೆಯಿಂದ ಸಾಗಿದ್ದು,  ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡಿವೆ.

ಇಂದು ಮಹಾರಾಜ ಟ್ರೋಫಿಯ ಮೊದಲ ಸೆಮಿ ಫೈನಲ್ ನಡೆಯುತ್ತಿದ್ದು, ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ದೇವದತ್ ಪಡಿಕ್ಕಲ್ ನೇತೃತ್ವದ ಗುಲ್ಬರ್ಗ ಮೈಸ್ಟಿಕ್ಸ್ ಮುಖಾಮುಖಿಯಾಗಲಿವೆ. ಕಳೆದ ಆವೃತ್ತಿಯಲ್ಲಿ ತನ್ನ ಕಳಪೆ ಪ್ರದರ್ಶನದಿಂದ  ಟೀಕೆಗೀಡಾಗಿದ್ದ  ಬೆಂಗಳೂರು ಬ್ಲಾಸ್ಟರ್ಸ್ ಈ  ಬಾರಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವ ಮೂಲಕ ಸೂಪರ್ ಕಮ್ ಬ್ಯಾಕ್ ಮಾಡಿದೆ. ಒಟ್ಟಾರೆ ಈ ಎರಡು ತಂಡಗಳು ಬಲಿಷ್ಠವಾಗಿದ್ದು, ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ನಾಳೆ ಮತ್ತೊಂದು ಸೆಮಿ ಫೈನಲ್ ನಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ  ಮೈಸೂರ್ ವಾರಿಯರ್ಸ್ ಕಾದಾಡಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read