HomeKarnatakaBIG NEWS: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಯಾಗಿ ದುರಂತ: ಓರ್ವ ನಾಪತ್ತೆ; ಇಬ್ಬರು ಬಚಾವ್

BIG NEWS: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಯಾಗಿ ದುರಂತ: ಓರ್ವ ನಾಪತ್ತೆ; ಇಬ್ಬರು ಬಚಾವ್

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಘನಾಶಿನಿ ನದಿಯಲ್ಲಿ ಮಗುಚಿಬಿದ್ದ ಪರಿಣಾಮ ಓರ್ವ ನಾಪತ್ತೆಯಗೈದ್ದು, ಇಬ್ಬರು ಸ್ವಲ್ಪದರಲ್ಲಿ ಬಚಾವ್ ಆಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಾಟದ ಬೇಲೆಕಾನ್ ಬಳಿ ನಡೆದಿದೆ.

ವಿನೋದ್ ಅಂಬಿಗ (31) ನಾಪತ್ತೆಯಾಗಿರುವ ಯುವಕ. ಮೂವರು ಇಂದು ಬೆಳಿಗ್ಗೆ ದೋಣಿಯಲ್ಲಿ ಮೀನುಗಾರಿಕೆಗೆ ನದಿಗೆ ಇಳಿದಿದ್ದರು. ಈ ವೇಳೆ ಬಿರುಗಾಳಿ, ಅಲೆಗಳ ಹೊಡೆತಕ್ಕೆ ಸಿಲುಕಿದ ದೋಣಿ ಪಲ್ಟಿಯಾಗಿದೆ. ವಿನೋದ್ ಅಂಬಿಗ ಕಣ್ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ. ಆತನ ಜೊತೆಗಿದ್ದ ಇಬ್ಬರು ಈಜಿಕೊಂಡು ಬಂದು ದಡ ಸೇರಿದ್ದಾರೆ.

ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಯುವಕನಿಗಾಗಿ ಶೋಧಕಾರ್ಯಾಚರಣೆ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular