ಬೆಂಗಳೂರು: ಆಸ್ತಿ ವಂಚನೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಯಾರದೋ ಆಸ್ತಿಗೆ ಮತ್ಯಾರೋ ನಕಲಿ ದಾಖಲೆ ನೀಡಿ ವಂಚನೆ, ವೈಯಕ್ತಿಕ ದಾಖಲೆ ನಕಲು ಮಾಡಿ ನಾನೇ ವಾರಸುದಾರ ಎಂದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆಸ್ತಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ.
ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ 2 ತಂತ್ರಾಂಶ ಜಾರಿಗೊಳಿಸಲಾಗಿದ್ದು, ಇಂದಿನಿಂದ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ತಮ್ಮ ತಮ್ಮ ಆಸ್ತಿ ಒಡೆತನದವರು ಆಧಾರ್, ಪಾಸ್ಪೋರ್ಟ್, ಪ್ಯಾನ್ ಈ ಮೂರರಲ್ಲಿ ಒಂದು ದಾಖಲೆ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಯಾರದೋ ಆಸ್ತಿಗೆ ಮತ್ತ್ಯಾರೋ ನಕಲಿ ದಾಖಲೆ ನೀಡಿ ಮೋಸ ಮಾಡುತ್ತಿದ್ದಾರೆ. ವೈಯಕ್ತಿಕ ದಾಖಲೆ ನಕಲು ಮಾಡಿ ನಾನೇ ವಾರಸುದಾರ ಎಂದು ವಂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ನೋಂದಣಿ ಕಚೇರಿಗಳಲ್ಲಿ ಆಧಾರ್, ಪಾಸ್ಪೋರ್ಟ್, ಪಾನ್ ಕಾರ್ಡ್ ಈ ಮೂರರಲ್ಲಿ ಒಂದು ದಾಖಲೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮುಂದೆ ಅಪಾಯಿಂಟ್ಮೆಂಟ್ ಸಿಸ್ಟಮ್ ಕಡ್ಡಾಯಗೊಳಿಸಲಾಗಿದೆ. ಸೆಪ್ಟೆಂಬರ್ 2ರಿಂದ ಆಯಾ ಜಿಲ್ಲೆಯ ಯಾವುದೇ ಉಪ ನೋಂದಣಿ ಕಚೇರಿಗೆ ತೆರಳಿ ನೋಂದಣಿ ಮಾಡಿಸಬಹುದಾಗಿದೆ.