ರಾಜ್ಯದ ಜನ ಬಯಸುವುದು ಮನೆಯಿಂದ ಹೊರಗೆ ಹೋದ ‘ಲಕ್ಷ್ಮಿ’ ಸುರಕ್ಷಿತವಾಗಿ ಬರುವ ಯೋಜನೆ : ಬಿಜೆಪಿ

ಬೆಂಗಳೂರು : ರಾಜ್ಯದ ಜನ ಬಯಸುವುದು ಮನೆಯಿಂದ ಹೊರಗೆ ಹೋದ ‘ಲಕ್ಷ್ಮಿ’ ಮನೆಗೆ ಸುರಕ್ಷಿತವಾಗಿ ಬರುವ ಯೋಜನೆ ಎಂದು ಬಿಜೆಪಿ ಕಾಂಗ್ರೆಸ್ ಕಾಲೆಳೆದಿದೆ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸಿದೆ.

ಗೃಹ ಲಕ್ಷ್ಮಿ ಕೊಟ್ಟೆವೆಂದು ಬೀಗುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ‘ರಾಜ್ಯದ ಜನ ಬಯಸುತ್ತಿರುವುದು ಮನೆಯಿಂದ ಹೊರಗೆ ಹೋದ ಲಕ್ಷ್ಮಿ ಗೃಹಕ್ಕೆ ಸುರಕ್ಷಿತವಾಗಿ ಬರುವ ಯೋಜನೆಯನ್ನು’. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ.

ಕಳೆದ 7 ತಿಂಗಳಲ್ಲಿ 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು ದೇಶದೆದುರು ಕರ್ನಾಟಕ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಸರಣಿ ರೂಪದಲ್ಲಿ ಮಹಿಳೆಯರಿಗೆ ಬೆದರಿಕೆಯೊಡ್ಡಿ ದೌರ್ಜನ್ಯ ಹಾಗೂ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದರೂ ಅತ್ಯಾಚಾರಿಗಳನ್ನು ಹತ್ತಿಕ್ಕುವಲ್ಲಿ ಸಂಪೂರ್ಣ ವಿಫಲವಾಗಿರುವ ಗೃಹ ಸಚಿವ ಪರಮೇಶ್ವರ್ ಅವರಿಗೆ ಭಗವಂತನೇ ಬುದ್ದಿ ಕರುಣಿಸಬೇಕು ಎಂದು ಬಿಜೆಪಿ ಟ್ವೀಟ್ ಮೂಲಕ ತಿವಿದಿದೆ.

https://twitter.com/BJP4Karnataka/status/1827999511559688229?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read