ವಯಸ್ಸಾದಂತೆ ದೃಷ್ಟಿ ಮಂದವಾಗುವುದು ಸಹಜ. ಕೆಲವೊಮ್ಮೆ ಚಿಕ್ಕ ವಯಸ್ಸಿನಲ್ಲೇ ದೃಷ್ಟಿಶಕ್ತಿ ಕಡಿಮೆಯಾಗಿ ಕನ್ನಡಕ ಧರಿಸಬೇಕಾಗಿ ಬರುತ್ತದೆ. ಕಣ್ಣಿನಲ್ಲಿ ತುರಿಕೆ, ಉರಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಶುರುವಾಗುತ್ತವೆ. ದೃಷ್ಟಿ ದುರ್ಬಲಗೊಳ್ಳಲು ಕಾರಣಗಳು ಹಲವು. ಹಾಗಾಗಿ ವಯಸ್ಸು ಕೂಡ ದೃಷ್ಟಿಯ ಮೇಲೆ ಯಾವುದೇ ಪರಿಣಾಮ ಬೀರಬಾರದೆಂದು ನೀವು ಬಯಸಿದರೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಉತ್ಕರ್ಷಣ ನಿರೋಧಕಗಳು, ವಿಟಮಿನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ದೃಷ್ಟಿಶಕ್ತಿಯನ್ನು ಸುಧಾರಿಸಬಲ್ಲ ಅಂತಹ 6 ಆಹಾರಗಳು ಯಾವುವು ಎಂಬುದನ್ನು ನೋಡೋಣ.
ಕ್ಯಾರೆಟ್: ಕ್ಯಾರೆಟ್ ಅತ್ಯಂತ ಆರೋಗ್ಯಕರ ತರಕಾರಿಗಳಲ್ಲೊಂದು. ಇದರಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಹಾಗಾಗಿ ಇದು ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಉದಾಹರಣೆಗೆ ಲುಟೀನ್ ಮತ್ತು ಜಿಯಾಕ್ಸಾಂಥಿನ್, ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿರುತ್ತವೆ. ಇವೆಲ್ಲವೂ ಕಣ್ಣಿನ ಸೋಂಕಿನಿಂದ ರಕ್ಷಿಸಲು ಕೆಲಸ ಮಾಡುತ್ತವೆ.
ಕ್ಯಾಪ್ಸಿಕಂ : ಕ್ಯಾಪ್ಸಿಕಂ ಒಂದು ರೀತಿಯ ಮೆಣಸಿನಕಾಯಿ. ಇದರಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿವೆ. ಹಾಗಾಗಿ ಕ್ಯಾಪ್ಸಿಕಂ ಅನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.
ಕುಂಬಳಕಾಯಿ: ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಜೊತೆಗೆ ಬೀಟಾ ಕ್ಯಾರೋಟಿನ್ ಕೂಡ ಇದೆ. ಹಾಗಾಗಿ ಇದು ಕಣ್ಣುಗಳಿಗೆ ಒಳ್ಳೆಯದು.
ಎಲೆಕೋಸು: ಎಲೆಕೋಸು ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ವಿಟಮಿನ್ ಎ, ಸಿ, ಕೆ ಜೊತೆಗೆ ಲುಟೀನ್ ಮತ್ತು ಜಿಯಾಕ್ಸಾಂಥಿನ್ನಂತಹ ಎಂಟಿಒಕ್ಸಿಡೆಂಟ್ಗಳನ್ನು ಒಳಗೊಂಡಿದೆ.
ಬ್ರೊಕೊಲಿ: ಬ್ರೊಕೊಲಿಯನ್ನು ಸಲಾಡ್ ಆಗಿಯೂ ಸೇವಿಸಬಹುದು. ಇದು ಲುಟೀನ್ ಮತ್ತು ಜಿಯಾಕ್ಸಾಂಥಿನ್ನಂತಹ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಜೊತೆಗೆ ವಿಟಮಿನ್ ಎ ಮತ್ತು ಸಿ ಕೂಡ ಇರುವುದರಿಂದ ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ.