ಅಭಿ – ಐಶ್ ಮದುವೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಜಾನ್ವಿ ಕಪೂರ್

ಅಭಿಷೇಕ್ ಬಚ್ಚನ್ ಮತ್ತು ಪತ್ನಿ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನದ ವದಂತಿ ಪ್ರಸ್ತುತ  ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆ ನಾನಿನ್ನೂ ವಿವಾಹಿತ ಎನ್ನುವ ಮೂಲಕ ಅಭಿಷೇಕ್‌ ಎಲ್ಲ ವದಂತಿಗೆ ತೆರೆ ಎಳೆದಿದ್ದರು. 17 ವರ್ಷದ ಹಿಂದೆ ಅಭಿಷೇಕ್‌ ಮತ್ತು ಐಶ್ವರ್ಯ ಮದುವೆ ನಡೆದಿದೆ. ಈ ಮದುವೆ ಸುಲಭವಾಗಿರಲಿಲ್ಲ. ಸಾಕಷ್ಟು ಸವಾಲು, ಸಮಸ್ಯೆಗಳ ಮಧ್ಯೆಯೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದ್ರಲ್ಲಿ ಗಮನ ಸೆಳೆದಿದ್ದು ಮಾಡೆಲ್‌ ಜಾನ್ವಿ ಕಪೂರ್.‌ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ 2007 ರಲ್ಲಿ ವಿವಾಹವಾದರು. ಮದುವೆ ಪ್ರತೀಕ್ಷಾದಲ್ಲಿ ನಡೆಯಿತು.  ಸಂಭ್ರಮಾಚರಣೆ ಜೋರಾದಾಗ, ಬಚ್ಚನ್ ಅವರ ಮನೆಯ ಹೊರಗೆ ದೊಡ್ಡ ವಿವಾದ ಭುಗಿಲೆದ್ದಿತು. ಜಾನ್ವಿ ಕಪೂರ್, ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರನ್ನು ಈಗಾಗಲೇ ಮದುವೆಯಾಗಿದ್ದಾಗಿ ಗಲಾಟೆ ಶುರು ಮಾಡಿದ್ದರು.

ಈ ಆರೋಪ ಇಲ್ಲಿಗೆ ನಿಲ್ಲಲಿಲ್ಲ. ಜಾನ್ವಿ ಕಪೂರ್, ಅಭಿಷೇಕ್ ಬಚ್ಚನ್ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದ್ರೆ ಸಾಕ್ಷ್ಯಾಧಾರದ ಕೊರತೆಯಿಂದ ಪ್ರಕರಣ ದಾಖಲಾಗಿರಲಿಲ್ಲ.

ದಸ್  ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಜೊತೆ ಕೆಲಸ ಮಾಡಿದ್ದ ಜಾನ್ವಿ ಕಪೂರ್, ಪಬ್ಲಿಸಿಟಿ ಗಮನ ಸೆಳೆಯಲು ಹೀಗೆ ಮಾಡಿದ್ದಾರೆ ಎನ್ನಲಾಗಿತ್ತು. ಆರಂಭದಲ್ಲಿ ಪ್ರತಿಭಟನೆ ಶಾಂತವಾಗಿತ್ತು. ಆದ್ರೆ ಅಭಿಷೇಕ್ ಬಚ್ಚನ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು ತಿಳಿದಾಗ ಗಲಾಟೆ ಜೋರಾಗಿತ್ತು. ಅಭಿಷೇಕ್ ಬಚ್ಚನ್ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಲು ಜಾನ್ವಿ ಕಪೂರ್, ಮಣಿಕಟ್ಟನ್ನು ಕೊರೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read