alex Certify ಮಂಕಿಪಾಕ್ಸ್ – ಚಿಕನ್ ಪಾಕ್ಸ್ ಮಧ್ಯೆ ಇರೋ ವ್ಯತ್ಯಾಸವೇನು ? ಇಲ್ಲಿದೆ ನೋಡಿ ʼಡಿಟೇಲ್ಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಕಿಪಾಕ್ಸ್ – ಚಿಕನ್ ಪಾಕ್ಸ್ ಮಧ್ಯೆ ಇರೋ ವ್ಯತ್ಯಾಸವೇನು ? ಇಲ್ಲಿದೆ ನೋಡಿ ʼಡಿಟೇಲ್ಸ್ʼ

ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ನಂತರ ಜಗತ್ತು ಜಾಗರೂಕವಾಗಿದೆ. ಪಾಕಿಸ್ತಾನದಲ್ಲಿ ಮೂರು ಪ್ರಕರಣಗಳು ಪತ್ತೆಯಾದ ನಂತರ, ಭಾರತದಲ್ಲೂ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಆಫ್ರಿಕಾದ ಹಲವು ದೇಶಗಳಲ್ಲಿಯೂ ಮಂಕಿಪಾಕ್ಸ್ ಹರಡುವಿಕೆ ಕಂಡುಬಂದಿದೆ. ಈ ಸೋಂಕಿನ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದ್ದರೂ ಮಂಕಿಪಾಕ್ಸ್ ಮತ್ತು ಚಿಕನ್ಪಾಕ್ಸ್ ಬಗ್ಗೆ ಅನೇಕ ಜನರು ಗೊಂದಲಕ್ಕೊಳಗಾಗಿದ್ದಾರೆ.

ಮಂಕಿಪಾಕ್ಸ್ ಮತ್ತು ಚಿಕನ್‌ ಪಾಕ್ಸ್ ನಡುವಿನ ವ್ಯತ್ಯಾಸವೇನು?:  ಎಂಪಾಕ್ಸ್ ರೋಗವು ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುತ್ತದೆ. ಚಿಕನ್‌ಪಾಕ್ಸ್ ವರಿಸೆಲ್ಲಾ-ಜೋಸ್ಟರ್ ವೈರಸ್‌ನಿಂದ ಉಂಟಾಗುತ್ತದೆ. ಈ ವೈರಸ್ ರಿಂಗ್ ವರ್ಮ್ ಅನ್ನು ಸಹ ಉಂಟುಮಾಡುತ್ತದೆ. ಎರಡೂ ವೈರಸ್‌,  ಉಸಿರಾಟದ ಹನಿಗಳ ಮೂಲಕ ಅಥವಾ ಚರ್ಮದ ಗಾಯಗಳೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ ಹರಡುತ್ತವೆ. ಚಿಕನ್ಪಾಕ್ಸ್ ಒಂದು ಸಾಮಾನ್ಯ ಸೋಂಕು. ಆದರೆ ಮಂಕಿಪಾಕ್ಸ್ ಅಪರೂಪದ ಸೋಂಕು. ಇದು ಸುಲಭವಾಗಿ ಹರಡುವುದಿಲ್ಲ.

ಮಂಕಿಪಾಕ್ಸ್ ಮತ್ತು ಚಿಕನ್ಪಾಕ್ಸ್ ಎರಡೂ ತುಂಬಾ ಗಂಭೀರ ರೋಗಗಳಲ್ಲ. ಸಕಾಲಿಕ ಚಿಕಿತ್ಸೆಯಿಂದ ಚೇತರಿಕೆ ಸಾಧ್ಯ. ಇವುಗಳ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ತಲೆನೋವು, ಬೆನ್ನು ನೋವು, ಸ್ನಾಯು ನೋವು, ನಡುಕ ಮತ್ತು ಆಯಾಸ. ಜ್ವರವು ಎರಡೂ ಸೋಂಕುಗಳಲ್ಲಿ ಸಾಮಾನ್ಯ ಲಕ್ಷಣವಾಗಿದೆ. ಆದರೆ ಮಂಕಿಪಾಕ್ಸ್‌ ನಲ್ಲಿ  ಜ್ವರದ 1 ರಿಂದ 5 ದಿನಗಳ ಮೊದಲು ದದ್ದುಗಳು ಕಾಣಿಸಿಕೊಳ್ಳುತ್ತದೆವ. ಚಿಕನ್‌ ಪಾಕ್ಸ್‌ ನಲ್ಲಿ ಜ್ವರದ 1 ರಿಂದ 2 ದಿನಗಳ ಮೊದಲು ದದ್ದುಗಳು ಕಾಣಿಸಿಕೊಳ್ಳುತ್ತದೆ. ಮಂಕಿಪಾಕ್ಸ್ ಸೋಂಕು ತಗುಲಿ, ಒಂದರಿಂದ ಎರಡು ವಾರಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಚಿಕನ್‌ ಫಾಕ್ಸ್‌ ನಲ್ಲಿ ಅದರ ಸಮಯವು 16 ದಿನವಾಗಿರುತ್ತದೆ.

ಮಂಕಿಪಾಕ್ಸ್‌ನ ಹೆಚ್ಚಿನ ಲಕ್ಷಣಗಳು ಚಿಕನ್‌ಪಾಕ್ಸ್‌ಗೆ ಹೋಲುತ್ತವೆಯಾದರೂ, ಒಂದು ರೋಗಲಕ್ಷಣವು ಎರಡನ್ನೂ ಪ್ರತ್ಯೇಕಿಸುತ್ತದೆ. ಮಂಕಿಪಾಕ್ಸ್‌ ನಲ್ಲಿ ದುಗ್ಧರಸ ಗ್ರಂಥಿಗಳಲ್ಲಿ ಊತದ ಸಮಸ್ಯೆ ಕಾಣಿಸುತ್ತದೆ. ಇದು ಚಿಕನ್‌ ಪಾಕ್ಸ್‌ ನಲ್ಲಿ ಕಂಡುಬರುವುದಿಲ್ಲ.

ಮಂಕಿಪಾಕ್ಸ್ ದದ್ದುಗಳು ಮುಖದಿಂದ ಪ್ರಾರಂಭವಾಗುತ್ತವೆ ಮತ್ತು ಅಂಗೈಗಳು ಮತ್ತು ಅಡಿಭಾಗಗಳು ಸೇರಿದಂತೆ ದೇಹದ ಅನೇಕ ಭಾಗಗಳನ್ನು ತಲುಪುತ್ತವೆ.  ಚಿಕನ್‌ ಪಾಕ್ಸ್ ದದ್ದುಗಳು ತುರಿಕೆಯಿಂದ ಶುರುವಾಗುತ್ತವೆ. ಅವು ಗುಳ್ಳೆಗಳಂತೆ, ಹಿಂಭಾಗ ಮತ್ತು ಮುಖದಿಂದ ಪ್ರಾರಂಭವಾಗಿ ದೇಹದ ಉಳಿದ ಭಾಗಗಳನ್ನು ತಲುಪುತ್ತವೆ. ಅಂಗೈ ಮತ್ತು ಅಡಿಭಾಗದ ಮೇಲೆ ದದ್ದು ಕಾಣಿಸುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...