ಬೆಂಗಳೂರು: ಅಂತಿಮ ದರ್ಶನಕ್ಕೆ ಬಂದ ವ್ಯಕ್ತಿ ಸ್ನೇಹಿತನಿಂದಲೇ ಕೊಲೆಯಾದ ಘಟನೆ ಬೆಂಗಳೂರಿನ ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ ನಲ್ಲಿ ಘಟನೆ ನಡೆದಿದೆ.
ಶರತ್ ಕೊಲೆಯಾದ ವ್ಯಕ್ತಿ. ಆತನ ಸ್ನೇಹಿತ, ಆಟೋ ಚಾಲಕ ಶರತ್ ಕೊಲೆ ಆರೋಪಿಯಾಗಿದ್ದಾನೆ. ಅಂಜನಪ್ಪ ಗಾರ್ಡನ್ ನಲ್ಲಿ ಸಾವಿನ ಮನೆಗೆ ಇಬ್ಬರು ಸ್ನೇಹಿತರು ಬಂದಿದ್ದರು. ಅಂತಿಮ ದರ್ಶನ ಪಡೆದು ಮುಂಜಾನೆ ತೆರಳುವಾಗ ಶರತ್ ಬೈದಾಡಿದ್ದ. ಯಾಕೆ ಬೈಯುತ್ತೀಯಾ ಎಂದು ಪ್ರಶ್ನಿಸಿದಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಸ್ನೇಹಿತ ಶರತ್ ಗೆ ಆಟೋ ಚಾಲಕ ಶರತ್ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಶರತ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪರಾರಿಯಾಗಿರುವ ಆಟೋ ಚಾಲಕ ಶರತ್ ಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.