HomeEntertainmentನಾಳೆ ಬಿಡುಗಡೆಯಾಗಲಿದೆ 'ಕಮರೊ2' ಚಿತ್ರದ 'ನನ್ನೊಲವೇ' ಹಾಡು

ನಾಳೆ ಬಿಡುಗಡೆಯಾಗಲಿದೆ ‘ಕಮರೊ2’ ಚಿತ್ರದ ‘ನನ್ನೊಲವೇ’ ಹಾಡು

2019 ರಲ್ಲಿ ತೆರೆ ಕಂಡಿದ್ದ ಪರಮೇಶ್ ಎ ನಿರ್ದೇಶನದ ಸಸ್ಪೆನ್ಸ್ ಹಾರರ್ ಕಥಾಧಾರಿತ ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು, ಇದೀಗ ಇದರ ಮುಂದುವರೆದ ಭಾಗ ‘ಕಮರೊ2’ ಈಗಾಗಲೇ ತನ್ನ ಟೀಸರ್ ನಿಂದಲೇ ಭರ್ಜರಿ ಸೌಂಡ್ ಮಾಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದ ನನ್ನೊಲವೇ ಎಂಬ ಮೆಲೋಡಿ ಗೀತೆ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದ್ದು, ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಚಿತ್ರವನ್ನು ಕನಸು ಪಿಚ್ಚರ್ಸ್ ಬ್ಯಾನರ್ ನಲ್ಲಿ ಪವನ್ ಗೌಡ ನಿರ್ಮಾಣ ಮಾಡಿದ್ದು, ಪ್ರಿಯಾಂಕ ಉಪೇಂದ್ರ ಹಾಗೂ ಸ್ವಾಮಿನಾಥನ್ ಅನಂತರಾಮನ್ ಸೇರಿದಂತೆ ರಜಿನಿ ಭಾರದ್ವಾಜ್, ರಾಘವೇಂದ್ರ ರಾಜಕುಮಾರ್, ಅಶ್ವಥ್ ನೇನಾಸಂ, ನಾಗೇಂದ್ರ ಅರಸ್, ಬೇಬಿ ಕುಶಿ, ಹರಿಣಿ, ಮಹೇಶ್ ರಾಜ್, ಸಂಕಲ್ಪ್, ಪವನ್ ಎಸ್ ನಾರಾಯಣ್, ಚೇತನ ಹರಿ, ಪರಿಣಿತಿ, ರಕ್ಷಿತ್ ದೊಡ್ಡೇರ, ಅನುಷಾ, ಗೋಪಿನಾಥ್ , ಚಂದ್ರಶೇಖರ ಹೊಸಪೇಟೆ. ಬಣ್ಣ ಹಚ್ಚಿದ್ದಾರೆ, ಆರ್ಯನ್ ಮುಕ್ತರಾಜ್ ಸಂಕಲನ, ಪ್ರಜ್ವಲ್ ಗೌಡ ಛಾಯಾಗ್ರಹಣ, ಹಾಗೂ ಮಹೇಶ್ ರಾಜ್ ನೃತ್ಯ ನಿರ್ದೇಶನ, ಹಾಗೂ ನರಸಿಂಹ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular