ಶರತ್ ಎಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯನ್ ಚಿತ್ರ ಗರ್ಲ್ಸ್ ಅಂಡ್ ರೋಸಸ್ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಇದರ ಟೀಸರ್ ಅನ್ನು ಇಂದು ಲಹರಿ ಮ್ಯೂಸಿಕ್ ಟಿ ಸೀರಿಸ್ ಯುಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಚಿತ್ರವನ್ನು ದ್ರೋಣ ಕ್ರಿಯೆಷನ್ಸ್ ಬ್ಯಾನರ್ ನಲ್ಲಿ ಎಚ್ ಆರ್ ನಟರಾಜ್ ನಿರ್ಮಾಣ ಮಾಡಿದ್ದು, ಅರ್ಜುನ್ ಸೇರಿದಂತೆ ಯಶ್ವಿಕಾ ನಿಷ್ಕಲಾ, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಕಿಶೋರ್, ಅವಿನಾಶ್, ತಾರಾ ಬಳಗದಲ್ಲಿದ್ದಾರೆ. ಶಶಿಕುಮಾರ್ ಎಸ್ ಸಂಗೀತ ಸಂಯೋಜನೆ ನೀಡಿದ್ದು, ಸಂಜೀವ್ ರೆಡ್ಡಿ ಸಂಕಲನ, ಆರ್ ಜನಾರ್ಧನ್ ಛಾಯಾಗ್ರಹಣ, ಧನಂಜಯ್ ನೃತ್ಯ ನಿರ್ದೇಶನ, ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.