HomeIndiaVideo | ರೈಲ್ವೆ ಹಳಿ ಮೇಲೆ ಉಲ್ಟಾ ಬಿದ್ದ ಆಮೆಯ ಪರದಾಟ; ದೇವರಂತೆ ಬಂದು ಜೀವ...

Video | ರೈಲ್ವೆ ಹಳಿ ಮೇಲೆ ಉಲ್ಟಾ ಬಿದ್ದ ಆಮೆಯ ಪರದಾಟ; ದೇವರಂತೆ ಬಂದು ಜೀವ ರಕ್ಷಿಸಿದ ರೈಲು ಚಾಲಕ

ಪಕ್ಕದ ರೈಲಿನ ಹಳಿ ಮೇಲೆ ಉಲ್ಟಾ ಬಿದ್ದಿದ್ದ ಆಮೆಯೊಂದು ಪರದಾಡುತ್ತಿದ್ದುದನ್ನು ಕಂಡ ರೈಲು ಚಾಲಕ ಮಿಂಚಿನಂತೆ ಬಂದು ಆಮೆಯನ್ನು ರಕ್ಷಿಸಿ ರೈಲು ಹಳಿ ಆಚೆಗೆ ಬಿಟ್ಟು ಹೋದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಟ್ರೇನ್ ಚಾಲಕನೊಬ್ಬ ಪಕ್ಕದ ರೈಲ್ವೆ ಟ್ರ್ಯಾಕ್ ಮೇಲೆ ಬೃಹತ್ ಆಮೆಯೊಂದು ಉಲ್ಟಾ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ್ದಾನೆ. ತಕ್ಷಣ ತನ್ನ ರೈಲು ನಿಲ್ಲಿಸಿದ ಚಾಲಕ ಟ್ರೇನ್ ನಿಂದ ಇಳಿದು ಬಂದು ಆಮೆಯನ್ನು ರಕ್ಷಿಸಿ ಅದನ್ನು ರೈಲು ಹಳಿಯ ಪಕ್ಕದ ಜಾಗದಲ್ಲಿ ಬಿಟ್ಟು ಬಂದಷ್ಟೇ ವೇಗದಲ್ಲಿ ರೈಲು ಹತ್ತಿ ತೆರಳಿದ್ದಾನೆ. ಶರವೇಗದಲ್ಲಿ ದೇವರಂತೆ ಬಂದು ಆಮೆ ರಕ್ಷಿಸಿ ಹೋದ ರೈಲು ಚಾಲಕನ ಮಾನವೀಯತೆಗೆ ಎಲ್ಲರೂ ಮೆಚ್ಚಲೇಬೇಕು.

For Latest News Updates, Join Our Whatsapp Community🚩
RELATED ARTICLES

Most Popular