ಉಡುಪಿ : ಪೋಷಕರು ಮೊಬೈಲ್ ನೀಡದಿದ್ದಕ್ಕೆ ಬಾವಿಗೆ ಹಾರಿ PUC ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಹಿಡಿಯಡ್ಕದಲ್ಲಿ ನಡೆದಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರಥಮೇಶ್ (16) ಎಂಬ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಪೋಷಕರು ಮೊಬೈಲ್ ಕೊಟ್ಟಿಲ್ಲ ಎಂದು ಮುನಿಸಿಕೊಂಡು ನಿನ್ನೆಯಿಂದ ಪರಮೇಶ್ ಕಾಣೆಯಾಗಿದ್ದನು. ನಂತರ ಪೋಷಕರು, ಸ್ಥಳೀಯರು ಹುಡುಕಾಡಿದಾಗ ಪ್ರಥಮೇಶ್ ಆತ್ಮಹತ್ಯೆಗೆ ಶರಣಾಗಿರುವುದು ಬಯಲಿಗೆ ಬಂದಿದೆ. ನಿರ್ಜನ ಪ್ರದೇಶದ ಬಾವಿಯೊಂದಕ್ಕೆ ಪರಮೇಶ್ ಜಿಗಿದಿದ್ದಾನೆ. ಘಟನೆ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.