ಕೋಲ್ಕತ್ತಾ: ಕೋಲ್ಕತ್ತಾ ಮಹಿಳಾ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್ ಹಾಕಿದ ಟಿಎಂಸಿ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರೇಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಹಿರಿಯ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರೇ ಅವರಿಗೆ ಬುಧವಾರ ಮಧ್ಯಾಹ್ನದ ವೇಳೆಗೆ ಮಧ್ಯ ಕೋಲ್ಕತ್ತಾದಲ್ಲಿರುವ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವಿಚಾರಣೆಗಾಗಿ ಬರುವಂತೆ ಕೋಲ್ಕತ್ತಾ ಪೊಲೀಸರು ಸಮನ್ಸ್ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಿಬಿಐ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಆತ್ಮಹತ್ಯೆಯ ಕಥೆ ಯಾರು ಸೃಷ್ಟಿಸಿದ್ದು? ಮಾಜಿ ಪ್ರಾಂಶುಪಾಲರು ಮತ್ತು ಪೊಲೀಸ್ ಕಮಿಷನರ್ ಅವರ ವಿಚಾರಣೆ ನಡೆಯಬೇಕು ಎಂದೆಲ್ಲಾ ರೇ ಪೋಸ್ಟ್ ಮಾಡಿದ್ದರು. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಮೂಲಕ ಕೆಲವು ತಪ್ಪು ಮಾಹಿತಿ ರವಾನೆಯಾಗಿರುವುದರಿಂದ ಅವರನ್ನು ಹಾಜರಾಗಲು ಕೇಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.