ತುಮಕೂರು: ಮುಂದೆ ಯಾರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ನೋಡಿಕೊಂಡು ಕಚೇರಿಯಲ್ಲಿ ಫೋಟೋ ಅಳವಡಿಸಿ ಎಂದು ತಮ್ಮ ಸಿಬ್ಬಂದಿಗೆ ಸಂಸದ ವಿ.ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಹೊಸದಾಗಿ ತೆರೆಯಲಾಗಿರುವ ಸಂಸದ ಕಚೇರಿಯಲ್ಲಿ ಮುಂದೆ ಯಾರು ಸಿಎಂ ಆಗುತ್ತಾರೆ ಎಂದು ನೋಡಿಕೊಂಡು ಭಾವಚಿತ್ರ ಅಳವಡಿಸಿ ಎಂದು ತಮ್ಮ ಸಿಬ್ಬಂದಿಗೆ ವಿ.ಸೋಮಣ್ಣ ಸಲಹೆ ನೀಡಿದ್ದಾರೆ.
ಹೊಸದಾಗಿ ಆರಂಭವಾಗಿರುವ ತಮ್ಮ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿ.ಸೋಮಣ್ಣ ನೀಡಿರುವ ಈ ಹೇಳಿಕೆ ಚರ್ಚೆಗೆ ಕರಣವಾಗಿದೆ. ಕಚೇರಿಯಲ್ಲಿ ಮಾಡಿರುವ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ವಿ.ಸೋಮಣ್ಣ, ಪಡಸಾಲೆಗೆ ಗೋಡೆಗೆ ಮುಂದಿನ ಮುಖ್ಯಮಂತ್ರಿ ಚಿತ್ರ ಹಾಕುವಂತೆ ತಮ್ಮ ಸಿಬ್ಬಂದಿಗಳಿಗೆ ಹೇಳಿದರು.