HomeKarnatakaಶಿವಮೊಗ್ಗಕ್ಕೆ ಬರಲಿದೆ 30 ಕೋಟಿ ಮೌಲ್ಯದ ಪಾಂಡಾ ಡಾಗ್

ಶಿವಮೊಗ್ಗಕ್ಕೆ ಬರಲಿದೆ 30 ಕೋಟಿ ಮೌಲ್ಯದ ಪಾಂಡಾ ಡಾಗ್

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ಬರೋಬ್ಬರಿ 30 ಕೋಟಿ ಮೌಲ್ಯದ ನಾಯಿ ಬರಲಿದೆ. ಇಂತದ್ದೊಂದು ವಿಶೇಷ ವೇದಿಕೆಗೆ ಸಾಕ್ಷಿಯಾಗಲಿದೆ ಸಿನಿ ಸಂಭ್ರಮ ಕಾರ್ಯಕ್ರಮ.

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಿನಿ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ 30 ಕೋಟಿ ಬೆಲೆಬಾಳುವ ಪಾಂಡ ನಾಯಿ ಭಾಗವಹಿಸಲಿದೆ. ಈ ಕಾರ್ಯಕ್ರಮಕ್ಕೆ ಪಾಂಡ ನಾಯಿ ಮಾಲೀಕ ಸತೀಶ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಪಾಂಡ ನಾಯಿಗೆ ಒಂದು ತಿಂಗಳ ಹಿಂದೆ ನಟಿ ರಾಗಿಣಿ ದ್ವಿವೇದಿ ಕೇಕ್ ಕಟ್ಟ ಮಾಡುವ ಮೂಲಕ ಲಾಂಚ್ ಮಾಡಿದ್ದರು.

ಸಿನಿಸಂಭ್ರಮ ಕಾರ್ಯಕ್ರಮದಲ್ಲಿ ಮಿಸ್ ಮಲ್ನಾಡ್, ಮಿಸ್ ಕರ್ನಾಟಕ ಫ್ಯಾಷನ್ ಶೋ ಕೂಡ ನಡೆಯಲಿದೆ. ನಾ ನಿನ್ನ ಬಿಡಲಾರೆ ಸೀರಿಯಲ್ ಪ್ರಮೋಷನ್ ಇದಾಗಿದ್ದು, ಇದಕ್ಕೆ 30 ಕೋಟಿ ರೂ ಬೆಲೆಯ ನಾಯಿ ಆಗಮಿಸುತ್ತಿರುವುದು ವಿಶೇಷ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular