HomeEntertainment"ಬ್ಲ್ಯಾಕ್ ಶೀಪ್" ಚಿತ್ರದ ಮೆಲೋಡಿ ಹಾಡು ರಿಲೀಸ್

“ಬ್ಲ್ಯಾಕ್ ಶೀಪ್” ಚಿತ್ರದ ಮೆಲೋಡಿ ಹಾಡು ರಿಲೀಸ್

ಜೀವನ್ ಹಳ್ಳಿಕಾರ್ ನಿರ್ದೇಶನದ “ಬ್ಲ್ಯಾಕ್ ಶೀಪ್” ಚಿತ್ರದ ಮೆಲೋಡಿ ಹಾಡೊಂದನ್ನು youtube ನಲ್ಲಿ ರಿಲೀಸ್ ಮಾಡಲಾಗಿದೆ. ‘ಹೃದಯವೇ’ ಎಂಬ ಈ ಹಾಡಿಗೆ ಸಿದ್ದಾರ್ಥ್ ಕಾಮತ್ ಹಾಗೂ ದಿವ್ಯ ರಾಮಚಂದ್ರ ಧ್ವನಿಯಾಗಿದ್ದು, ಶೈಲೇಶ್ ಕುಮಾರ್ ಸಾಹಿತ್ಯವಿದೆ.

ಈ ಚಿತ್ರವನ್ನು ಗ್ಲಿಟರರ್ಸ್ ಸ್ಟಾರ್ ಹೌಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಅಶ್ವಿನಿ ಗುರುಚರಣ್ ನಿರ್ಮಾಣ ಮಾಡಿದ್ದು, ಮಂಜುನಾಥ್ ಪಿ ರಾವ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ವಿಶಾಲ್ ಕಿರಣ್ ಸೇರಿದಂತೆ ಪ್ರಶಾಂತ್ ವಿ ಹರಿ, ಶಿವಾಂಗಿ ಡೇವಿ, ನಿಶಾ ಹೆಗ್ಡೆ, ಕೆಎಸ್ ಶ್ರೀಧರ್, ಕೃಷ್ಣ ಹೆಬ್ಬಾಳೆ, ಸುಂದರ್ ವೀಣಾ, ಭಜರಂಗಿ ಪ್ರಸನ್ನ ತೆರೆ ಹಂಚಿಕೊಂಡಿದ್ದಾರೆ. ಆಕಾಶ್ ಮಹೇಂದ್ರ ಕಾರ್ ಸಂಕಲನ, ಹಾಗೂ ದೇವು ಅವರ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular