ನವದೆಹಲಿ: 1989ರ ಬ್ಯಾಚ್ IAS ಅಧಿಕಾರಿ ಗೋವಿಂದ್ ಮೋಹನ್ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಸಂಪುಟದ ನೇಮಕಾತಿ ಸಮಿತಿ(ಎಸಿಸಿ) ಬುಧವಾರ ಗೋವಿಂದ್ ಮೋಹನ್ ಅವರನ್ನು ಮುಂದಿನ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನೇಮಿಸಿದೆ. ಅವರು ಸಿಕ್ಕಿಂ ಕೇಡರ್‌ನ 1989-ಬ್ಯಾಚ್‌ನ ಭಾರತೀಯ ಆಡಳಿತ ಸೇವೆ(IAS) ಅಧಿಕಾರಿಯಾಗಿದ್ದಾರೆ.
ಗೋವಿಂದ್ ಮೋಹನ್ ಪ್ರಸ್ತುತ ಸಂಸ್ಕೃತಿ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಜಯ್ ಕುಮಾರ್ ಭಲ್ಲಾ ಅವರ ನಂತರ ಗೃಹ ಸಚಿವಾಲಯಕ್ಕೆ ಗೋವಿಂದ್ ಮೋಹನ್ ಬರಲಿದ್ದಾರೆ.