ಮೈಸೂರು ಅರಮನೆ ವೀಕ್ಷಣೆಗೆ ವಾಟ್ಸಪ್ ನಲ್ಲೇ ಟಿಕೆಟ್: ಇಲ್ಲಿದೆ ಮಾಹಿತಿ: ಇಂದಿನಿಂದಲೇ ವಿಶೇಷ ಸೌಲಭ್ಯ ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 3ರಿಂದ 12ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ವೇಳೆ ಪ್ರವಾಸಿಗರಿಗಾಗಿ ಇಂದಿನಿಂದ ಹೊಸ ವ್ಯವಸ್ಥೆಯೊಂದು ಜಾರಿಯಾಗಿದೆ.

ಮೈಸೂರು ಅರಮನೆ ವೀಕ್ಷಣೆಗೆ ಇಂದಿನಿಂದ ವಾಟ್ಸಪ್ ನಲ್ಲಿಯೇ ಟಿಕೆಟ್ ಪಡೆದುಕೊಳ್ಳಬಹುದಾಗಿದೆ. ಅರಮನೆ ನೋಡಲು ಬರುವವರ ಅನುಕೂಲಕ್ಕಾಗಿ EDCS ಮೊಬೈಲ್ ಒನ್ ಯೋಜನೆ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ EDCS ಮೊಬೈಲ್ ಒನ್ ಯೋಜನೆ ಮೂಲಕವಾಗಿ ಮೊಬೈಲ್ ವಾಟ್ಸಪ್ ಮೂಲಕ ಮೈಸೂರು ಅರಮನೆ ವೀಕ್ಷಣೆಗೆ ಟಿಕೆಟ್ ಪಡೆದುಕೊಳ್ಳಬಹುದು. ವಾಟ್ಸಪ್ ನಲ್ಲಿ 8884160088 ಸಂಖ್ಯೆಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳುಹಿಸುವ ಮೂಲಕ ಟಿಕೆಟ್ ಪಡೆಯಬಹುದು.

ಹೀಗೆ ವಾಟ್ಸಪ್ ನಲ್ಲಿ ಖರೀದಿಸಿದ ಟಿಕೆಟ್ 5 ದಿನಗಳ ವರೆಗೆ ಮಾನ್ಯತೆ ಹೊಂದಿರುತ್ತದೆ. ಇದರಿಂದಾಗಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಗಾಗಿ ಪರದಾಡುವ ಸ್ಥಿತಿ ತಪ್ಪುತ್ತದೆ. ಜೊತೆಗೆ ಸಮಯವೂ ಉಳಿತಾಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read