ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ನಟನೆಯ ಬಹು ನಿರೀಕ್ಷಿತ ‘ಗೌರಿ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಹಾಡುಗಳು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು, ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ.
ಈ ಚಿತ್ರದಲ್ಲಿ ಸಮರ್ಜಿತ್ ಅವರಿಗೆ ಜೋಡಿಯಾಗಿ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಅಭಿನಯಿಸಿದ್ದು, ಮಾನಸಿ ಸುಧೀರ್, ಸಂಪತ್ ಮೈತ್ರಿಯ ಹಾಗೂ ರಾಜೀವ್ ಪಿಲ್ಲೆ ಉಳಿದ ಪಾತ್ರವರ್ಗದಲ್ಲಿದ್ದಾರೆ. ಲಾಫಿಂಗ್ ಬುದ್ಧ ಫಿಲಂಸ್ ಬ್ಯಾನರ್ ನಲ್ಲಿ ಇಂದ್ರಜಿತ್ ಲಂಕೇಶ್ ಬಂಡವಾಳ ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರಾದ ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೆರ್ಗಿ ಮತ್ತು ಅನಿರುದ್ಧ ಶಾಸ್ತ್ರಿ ಅವರ ಸಂಗೀತ ಸಂಯೋಜನೆ ಇದ್ದು, ಡಾಕ್ಟರ್ ಕೆ ರವಿವರ್ಮ ಮತ್ತು ಡಿಫರೆಂಟ್ ಧ್ಯಾನಿ ಅವರ ಸಾಹಸ ನಿರ್ದೇಶನವಿದೆ. ಕೆ ಎಂ ಪ್ರಕಾಶ್ ಸಂಕಲನ, ಮೋಹನ್ ಭಜರಂಗಿ ನೃತ್ಯ ನಿರ್ದೇಶನವಿದ್ದು, ಬಿಎ ಮಧು, ರಾಜಶೇಖರ್ ಕೆ ಎಲ್, ಮಾಸ್ತಿ ಹಾಗೂ ಮನು ತಪಸ್ವಿ ಸಂಭಾಷಣೆ ಬರೆದಿದ್ದಾರೆ.