ಮಹಿಳಾ ಪ್ರಧಾನ ಕಥಾ ಹಂದರ ಹೊಂದಿರುವ ‘ಲೈಫ್ ಆಫ್ ಮೃದುಲ’ ಚಿತ್ರದ ಟ್ರೈಲರ್, ನಿನ್ನೆಯಷ್ಟೇ youtube ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರಲ್ಲಿ ಕುತೂಹಲ ಕೆರಳಿಸಿದೆ.
ಚೇತನ್ ತ್ರಿವೇನ್ ನಿರ್ದೇಶನದ ಈ ಚಿತ್ರವನ್ನು ಮದನ್ ಮೂವೀಸ್ ಬ್ಯಾನರ್ ನಲ್ಲಿ ಮದನ್ ಕುಮಾರ್ ಸಿ ಮತ್ತು ಯೋಗಿ ದಾವಣಗೆರೆ ನಿರ್ಮಾಣ ಮಾಡಿದ್ದಾರೆ. ಪೂಜಾ ಲೋಕಾಪುರ್ ಸೇರಿದಂತೆ ಆಶಾ ಸುಜಯ್, ಮದನ್ ಕುಮಾರ್ ಸಿ, ಶಶಾಂಕ್ ಹಾಗೂ ಕುಲದೀಪ್ ಬಣ್ಣ ಹಚ್ಚಿದ್ದು, ರಾಹುಲ್ ಎಸ್ ವಾಸ್ಟರ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಸಂತ್ ಕುಮಾರ್ ಸಂಕಲನ, ಆಶು ಸುರೇಶ್ ಛಾಯಾಗ್ರಹಣ, ಯೋಗಿ ದಾವಣಗೆರೆ ಅವರ ಸಂಭಾಷಣೆ, ಮತ್ತು ವೇಣುಗೋಪಾಲ್ ನೃತ್ಯ ನಿರ್ದೇಶನವಿದೆ.