alex Certify ನಿಮ್ಮ ಕುಟುಂಬದ ಜೊತೆಗಿನ ಸಂಬಂಧಗಳನ್ನು ಬಲಪಡಿಸಲು ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕುಟುಂಬದ ಜೊತೆಗಿನ ಸಂಬಂಧಗಳನ್ನು ಬಲಪಡಿಸಲು ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿ

ಮುಂಜಾನೆ ನಿಮ್ಮ ಮನಸ್ಥಿತಿ ಹೇಗಿರುತ್ತದೆಯೋ ಹಾಗೇ ನೀವು ದಿನವಿಡೀ ಇರುತ್ತೀರಿ. ಹಾಗಾಗಿ ಬೆಳಿಗ್ಗೆ ನಿಮ್ಮ ಮನಸ್ಥಿತಿಯನ್ನು ಕೆಡಿಸಿಕೊಳ್ಳಬೇಡಿ ಇದರಿಂದ ನೀವು ದಿನವಿಡೀ ಕಿರಿಕಿರಿಯನ್ನು ಅನುಭವಿಸುತ್ತೀರಿ. ಹಾಗಾಗಿ ನೀವು ಬೆಳಿಗ್ಗೆ ಮಾಡುವಂತಹ ಕೆಲವು ಕೆಲಸಗಳು ಇಡೀ ದಿನ ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿಡುತ್ತದೆ. ಅದರಲ್ಲೂ ನಿಮ್ಮ ಕುಟುಂಬಗಳು ಮತ್ತು ನಿಮ್ಮ ಪ್ರೀತಿಪಾತ್ರರ ವಿಷಯಕ್ಕೆ ಬಂದಾಗ, ಕೆಲಸಕ್ಕೆ ಹೊರಡುವ ಮೊದಲು ನೀವು ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ಪ್ರಯತ್ನಿಸಬೇಕು. ಅವರೊಂದಿಗೆ ನಗುನಗುತ್ತಾ ಇದ್ದರೆ ದಿನದ ಉಳಿದ ದಿನಗಳಲ್ಲಿ ನೀವು ಸಂತೋಷದಿಂದ ಇರಬಹುದು.

ಹಾಗಾಗಿ ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮೊದಲು ಕುಟುಂಬ ಸಂಬಂಧವನ್ನು ಬಲಪಡಿಸುವ ಈ ಸಲಹೆಗಳನ್ನು ಅನುಸರಿಸಿ.

ಒಟ್ಟಿಗೆ ಉಪಹಾರ ಸೇವಿಸಿ: ನಿಮ್ಮ ಕುಟುಂಬದವರ ಜೊತೆ ಸಮಯ ಕಳೆಯಲು ಬೆಳಿಗ್ಗೆ ಉಪಹಾರದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಉಪಹಾರ ಸೇವಿಸಿ. ಇದರಿಂದ ಪರಸ್ಪರರ ಆ ದಿನದ ಯೋಜನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.

ಬೆಳಿಗ್ಗೆ ವಾಕಿಂಗ್ ಮಾಡಿ: ಬೆಳಗಿನ ವಾಕಿಂಗ್ ನಿಮ್ಮ ಆರೋಗ್ಯವನ್ನು ವೃದ್ಧಿಸುವುದಲ್ಲದೇ ನಿಮ್ಮ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವನ್ನು ಗಟ್ಟಿಸುತ್ತದೆ. ಹಾಗಾಗಿ ಬೆಳಿಗ್ಗೆ ಕುಟುಂಬದವರ ಜೊತೆ ಸ್ವಲ್ಪ ಹೊತ್ತು ವಾಕಿಂಗ್ ಮಾಡಿ.

ಬೆಳಗಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ: ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ, ನೀವು ಪರಸ್ಪರರಿಗೆ ಸಹಾಯ ಮಾಡಬಹುದು. ಬೆಳಗ್ಗಿನ ಟಿಫಿನ್ ತಯಾರಿಸುವುದು, ಮಕ್ಕಳ ಟಿಫಿನ್ ಬಾಕ್ಸ್ ಪ್ಯಾಕ್ ಮಾಡುವುದು ಮುಂತಾದವುಗಳನ್ನು ಒಟ್ಟಿಗೆ ಮಾಡಿ.

ಬೆಳಗಿನ ಪ್ರಾರ್ಥನೆ: ಬೆಳಿಗ್ಗೆ ಪ್ರಾರ್ಥನೆ ಅಥವಾ ಸಣ್ಣ ಧ್ಯಾನ ಮಾಡುವಾಗ ಕುಟುಂಬದವರ ಜೊತೆಯಲ್ಲಿ ಮಾಡಿ. ಈ ಅಭ್ಯಾಸ ಕುಟುಂಬ ಸದಸ್ಯರಲ್ಲಿ ಏಕತೆ, ಶಾಂತಿ ಮತ್ತು ಶಕ್ತಿಯ ಭಾವನೆಯನ್ನು ಬೆಳೆಸುತ್ತದೆ.

ಕೃತಜ್ಞತೆಯನ್ನು ವ್ಯಕ್ತಪಡಿಸಿ: ನಿಮ್ಮ ಕೆಲಸಕ್ಕೆ ಸಹಾಯ ಮಾಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಇದರಿಂದ ಅವರು ಖುಷಿಪಡುತ್ತಾರೆ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುತ್ತದೆ.

ಒಟ್ಟಾರೆ ಈ ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮವರೊಂದಿಗೆ ನಿಮ್ಮ ಬಂಧವನ್ನು ಗಟ್ಟಿಗೊಳಿಸಿ. ಇದರಿಂದ ನೀವು ಸುಖಕರವಾದ ಜೀವನವನ್ನು ಸಾಗಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...