ನಾಗಚೈತನ್ಯ – ಶೋಭಿತಾರಲ್ಲಿ ಯಾರು ಹೆಚ್ಚು ಶ್ರೀಮಂತರು ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ನಟ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಷ್ಟು ದಿನ ಕದ್ದುಮುಚ್ಚಿ ಡೇಟ್‌ ಮಾಡ್ತಿದ್ದ ಜೋಡಿ ಈಗ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ನಿಮಗೆಲ್ಲ ತಿಳಿದಿರುವಂತೆ ನಾಗ ಚೈತನ್ಯ, ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಮಗ. ನಾಗಾರ್ಜುನ್‌ ತಮ್ಮ ಮಗ ಹಾಗೂ ಶೋಭಿತಾ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾಗ ಚೈತನ್ಯ ಹಾಗೂ ಶೋಭಿತಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದು ಸಮಂತಾ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಮಧ್ಯೆ, ಶೋಭಿತಾ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅಭಿಮಾನಿಗಳು ಆಸಕ್ತರಾಗಿದ್ದಾರೆ.  ನಾವಿಂದು ನಾಗಚೈತನ್ಯ ಹಾಗೂ ಶೋಭಿತಾ ನಿವ್ವಳ ಮೌಲ್ಯದ ಬಗ್ಗೆ ಮಾಹಿತಿ ನೀಡ್ತೇವೆ.

ವರದಿ ಪ್ರಕಾರ, ನಾಗ ಚೈತನ್ಯ 154 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದಾರೆ. ಅವರ ತಂದೆ ನಾಗಾರ್ಜುನ ಅವರು 3,100 ಕೋಟಿಗಳಷ್ಟು ನಿವ್ವಳ ಮೌಲ್ಯದೊಂದಿಗೆ ದಕ್ಷಿಣ ಭಾರತದ ಶ್ರೀಮಂತ ನಟರಾಗಿದ್ದಾರೆ.

ಇನ್ನು ಶೋಭಿತಾ ಧೂಳಿಪಾಲ ಅವರ ಅಂದಾಜು ನಿವ್ವಳ ಮೌಲ್ಯವು 7 ರಿಂದ 10 ಕೋಟಿ ರೂಪಾಯಿ ಇದೆ. ನಾಗ ಚೈತನ್ಯ ಪ್ರತಿ ಚಿತ್ರ ಅಥವಾ ವೆಬ್ ಸರಣಿಗೆ 5 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಧೂತ, ಒಟಿಟಿಯ ಚೊಚ್ಚಲ ಚಿತ್ರಕ್ಕಾಗಿ  ಅವರು 5 ರಿಂದ 8 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿ ಮಾಡಲಾಗಿದೆ.  ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ 5 ಕೋಟಿ ಪಡೆದಿದ್ದಾರೆ.

ಇನ್ನು ಶೋಭಿತಾ ಧೂಳಿಪಾಲ ಪೊನ್ನಿಯಿನ್ ಸೆಲ್ವನ್ ಮತ್ತು ಮೇಡ್ ಇನ್ ಹೆವೆನ್  ನಂತಹ  ಚಲನಚಿತ್ರ  ಮತ್ತು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಪ್ರತಿ ಪ್ರಾಜೆಕ್ಟ್‌ ಗೆ 70 ಲಕ್ಷದಿಂದ 1 ಕೋಟಿ ಪಡೆಯುತ್ತಾರೆ. ಪೊನ್ನಿಯಿನ್ ಸೆಲ್ವನ್: ಐ  ಚಿತ್ರಕ್ಕಾಗಿ ಅವರು 1 ಕೋಟಿ ಸಂಭಾವನೆ ಪಡೆದಿದ್ದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read