HomeKarnatakaರೀಲ್ಸ್ ನಲ್ಲಿ ಪರಿಚಯ: ಮಹಿಳೆಯೊಂದಿಗೆ ಕ್ಯಾಬ್ ಚಾಲಕನ ಪ್ರೀತಿ-ಪ್ರೇಮ-ಮೋಸದಾಟ; ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

ರೀಲ್ಸ್ ನಲ್ಲಿ ಪರಿಚಯ: ಮಹಿಳೆಯೊಂದಿಗೆ ಕ್ಯಾಬ್ ಚಾಲಕನ ಪ್ರೀತಿ-ಪ್ರೇಮ-ಮೋಸದಾಟ; ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

ಬೆಂಗಳೂರು: ಕುಡಕ ಪತಿಯಿಂದ ದೂರವಾಗಿ ಬದುಕು ಕಟ್ಟಿಕೊಂಡಿದ್ದ ಮಹಿಳೆ ರೀಲ್ಸ್ ಹಿಂದೆ ಬಿದ್ದು, ಕ್ಯಾಬ್ ಚಾಲಕನ ಪ್ರೇಮಕ್ಕೆ ಸಿಲುಕಿ ಮೋಸಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನ ಕೆಂಗೇರಿ ವ್ಯಾಪ್ತಿಯಲ್ಲಿ ನಡೆದಿದೆ.

ರೀಲ್ಸ್ ನಲ್ಲಿ ಪರಿಚಯನಾದ ಕ್ಯಾಬ್ ಚಾಲಕ ಪ್ರಜ್ವಲ್ ಎಂಬಾತ ವಿವಾಹಿತ ಮಹಿಳೆಗೆ ಬಾಳು ಕೊಡುವುದಾಗಿ ಹೇಳಿ ನಂಬಿಸಿ ಆಕೆಯ ಜೊತೆ ಕೆಲ ದಿನಗಳ ಕಾಲ ಇದ್ದು, ಮೋಸ ಮಾಡಿ ಪರಾರಿಯಾಗಿದ್ದಾನೆ. ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಖಲಿಸಿದ್ದಾರೆ.

ಪತಿಯಿಂದ ದೂರವಾಗಿದ್ದ ಮಹಿಳೆ ರೀಲ್ಸ್ ಮಾಡಿ ಸಾಮಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದರು. ಇದನ್ನು ಕಂಡ ಕ್ಯಾಬ್ ಚಾಲಕ ಪ್ರಜ್ವಲ್, ಲೈಕ್, ಕಮೆಂಟ್ ಹಾಕಿದ್ದಾನೆ. ಮಹಿಳೆ ಕೂಡ ಆತನ ಕಮೆಂಟ್ ಗಳಿಗೆ ಪ್ರತಿಕ್ರಿಯಿಸಿದ್ದಾಳೆ. ಹೀಗೆ ಆರಂಭವಾದ ಪರಿಚಯ ಸ್ನೇಹವಾಗಿ ಒಂದು ದಿನ ಕ್ಯಾಬ್ ಚಾಲಕ ಮನೆ ಬಳಿ ಬಂದಿದ್ದಾನೆ. ಅಲ್ಲದೇ ನಿನ್ನನ್ನೇ ಮದುವೆಯಾಗುವುದಾಗಿ ಹೇಳಿದ್ದ. ಇಬ್ಬರ ನಡುವೆ ಪ್ರೀತಿ-ಪ್ರೇಮವೆಂದು ಕೆಲ ಕಾಲ ಒಟ್ಟಿಗೆ ವಾಸವಾಗಿದ್ದಾರೆ. ಮಹಿಳೆಯ ಜೊತೆಗೆ ಇದ್ದ ಕ್ಯಾಬ್ ಚಾಲಕ ಕೆಲ ದಿನಗಳ ಹಿಂದೆ ಆಕೆಯನ್ನು ಬಿಟ್ಟು ಹೋಗಿದ್ದಾನೆ. ಇದೀಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕ್ಯಾಬ್ ಚಾಲಕನನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಗೆ 13 ವರ್ಷಗಳ ಹಿಂದೆ ವ್ಯಕ್ತಿಯೋರ್ವನ ಜೊತೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಬರಬರುತ್ತಾ ಪತಿಮಹಾಶಯನ ಕುಡಿತದ ಚಟ ಹೆಚ್ಚಾಗಿತ್ತು. ಅಲ್ಲದೇ ಹೆಂಡತಿ ಮಕ್ಕಳಿಗೆ ಹಿಂಸೆ ನೀಡುವುದು, ಕಿರುಕುಳ ನೀಡುವುದು ಮಾಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಪತಿಯಿಂದ ದೂರಾಗಿ ತವರು ಸೇರಿದ್ದಳು. ವರ್ಷದ ಹಿಂದಷ್ಟೇ ಬೆಂಗಳೂರಿನಲ್ಲಿ ವಾಸವಾಗಿದ್ದಳು ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular