ಬೆಂಗಳೂರು : ಪ್ರಮುಖ ಪತ್ರಿಕೆಗಳಲ್ಲಿ ಶಿಷ್ಯವೇತನ ಸಹಿತ ತರಬೇತಿ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಮುಖ ಪತ್ರಿಕೆಗಳಲ್ಲಿ ಶಿಷ್ಯವೇತನ ಸಹಿತ ತರಬೇತಿ ಪಡೆಯಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕರ್ನಾಟಕ ಮಾಧ್ಯಮ ಅಕಾಡೆಮಿ ಅರ್ಹತಾ ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆಯ ದಿನಾಂಕ, ಸ್ಥಳ ಮತ್ತು ಸಮಯವನ್ನು ಸಂದರ್ಶನದ ವೇಳೆ ತಿಳಿಸುವುದಾಗಿ ಪ್ರಕಟಣೆಯನ್ನು ಹೊರಡಿಸಿದೆ.
ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ/ಪದವಿ ಮುಗಿಸಿದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ನುರಿತ ಪತ್ರಕರ್ತರಾಗಲು ಸುವರ್ಣವಕಾಶವಿದೆ. ಪ್ರಮುಖ ದಿನಪತ್ರಿಕೆಗಳಲ್ಲಿ 2 ತಿಂಗಳು ತರಬೇತಿ ಮಾಸಿಕ 20,000 ಶಿಷ್ಯವೇತನ ಸಹಿತ ಅವಕಾಶ ಸಿಗಲಿದೆ.
ಪ್ರಸಕ್ತ ಸಾಲಿನಲ್ಲಿ 28 ವರ್ಷದೊಳಗಿನ ಐದು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 26 ಕೊನೆಯ ದಿನ. ಅಗತ್ಯ ದಾಖಲೆಗಳು ಸ್ವವಿರ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಆರ್ಥಿಕ ಸ್ಥಿ, ಅಂಕಪಟ್ಟಿಗಳ ಫೋಟೊ ಪ್ರತಿಗಳನ್ನು ಸ್ಕ್ಯಾನ್ ಮಾಡಿ karnatakamediaacademy@gmail.om ಗೆ ಕಳುಹಿಸಬಹುದಾಗಿದೆ.