HomeKarnatakaಅನಾಥ ಶವಗಳ ಸಂಸ್ಕಾರ: ತಂದೆ-ಮಗಳ ಕಾರ್ಯಕ್ಕೆ ಶಿವಮೊಗ್ಗ ಪೊಲೀಸರಿಂದ ವಿಶೇಷ ಗೌರವ ಸನ್ಮಾನ

ಅನಾಥ ಶವಗಳ ಸಂಸ್ಕಾರ: ತಂದೆ-ಮಗಳ ಕಾರ್ಯಕ್ಕೆ ಶಿವಮೊಗ್ಗ ಪೊಲೀಸರಿಂದ ವಿಶೇಷ ಗೌರವ ಸನ್ಮಾನ

ಶಿವಮೊಗ್ಗ: ಹಲವು ವರ್ಷಗಳಿಂದ ಅನಾಥ ಶವಗಳನ್ನು ಸಂಸ್ಕಾರ ಮಾಡುತ್ತಾ ಬಂದಿರುವ ತಂದೆ ಹಾಗೂ ಮಗಳ ನಿಸ್ವಾರ್ಥ ಸೇವೆಗೆ ಶಿವಮೊಗ್ಗ ಪೊಲೀಸರು ವಿಶೇಷ ರೀತಿಯಲ್ಲಿ ಗೌರವಿಸಿ ಸನ್ಮಾನಿಸಿದ್ದಾರೆ.

ಶಿವಮೊಗ್ಗ ಟೌನ್ ಗಾಡಿಕೊಪ್ಪದ ನಿವಾಸಿ ರವಿ ಎಸ್ ಮತ್ತು ಮಗಳು ಧನುಶ್ರೀ 2005ರಿಂದ ಜಿಲ್ಲೆಯಲ್ಲಿ ಅನಾಥ ಶವಗಳ ಬಗ್ಗೆ ಮಾಹಿತಿ ಸಿಕ್ಕಿದರೆ, ಅಥವಾ ಪೊಲೀಸ್ ಇಲಾಖೆ ಮಾಹಿತಿ ನೀಡಿದರೆ ಅಂತಹ ಶವಗಳನ್ನು ಸಾಗಿಸಿ ಸಂಸ್ಕಾರ ಮಾಡುತ್ತಿದ್ದಾರೆ. ತಂದೆ-ಮಗಳ ನಿಸ್ವಾರ್ಥ ಸೇವೆ ಕಂಡು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ರವಿ ಎಸ್ ಹಾಗೂ ಮಗಳು ಧನುಶ್ರೀ ಇಬ್ಬರನ್ನು ಗೌರವಿಸಿ ಸನ್ಮಾನಿಸಲಾಯಿತು.

ಶಿವಮೊಗ್ಗ ಜಿಲ್ಲಾ ಪೊಲಿಸ್ ಕಚೇರಿಯಲ್ಲಿ ರವಿ ಎಸ್ ಹಾಗೂ ಮಗಳು ಧನುಶ್ರೀಗೆ ಎಸ್ ಪಿ ಮಿಥುನ್ ಕುಮಾರ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈ ಎಸ್ ಪಿ ಬಾಬು ಆಂಜನಪ್ಪ, ಸುರೇಶ್ ಎಂ ಉಪಸ್ಥಿತರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular