ಹಣದುಬ್ಬರ ನಿಮ್ಮ ಊಟದ ಬೆಲೆಯನ್ನೂ ಹೆಚ್ಚಿಸಿದೆ. CRISIL MI&A (ಮಾರ್ಕೆಟ್ ಇಂಟೆಲಿಜೆನ್ಸ್ & ಅನಾಲಿಟಿಕ್ಸ್ ) ಸಂಶೋಧನೆಯ ಪ್ರಕಾರ ಜುಲೈನಲ್ಲಿ ತಿಂಗಳ ಆಧಾರದ ಮೇಲೆ ಸಸ್ಯಾಹಾರಿ ಥಾಲಿಗಳ ಬೆಲೆಯು 11 ಪ್ರತಿಶತದಷ್ಟು ಹೆಚ್ಚಾದರೆ, ಮಾಂಸಾಹಾರಿ ಥಾಲಿಗಳು 6 ಪ್ರತಿಶತದಷ್ಟು ಏರಿಕೆ ಕಂಡಿವೆ.
ವರ್ಷದಿಂದ ವರ್ಷಕ್ಕೆ ಥಾಲಿ ಬೆಲೆ ಏರಿಕೆ ವಿಚಾರದಲ್ಲಿ ವಿಭಿನ್ನವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈನಲ್ಲಿ ವೆಜ್ ಥಾಲಿಯ ಬೆಲೆಯು ಶೇಕಡಾ 4 ರಷ್ಟು ಕಡಿಮೆಯಾಗಿದ್ದು, ಮಾಂಸಾಹಾರಿ ಥಾಲಿಯ ಬೆಲೆಯು ಶೇಕಡಾ 9 ಕ್ಕಿಂತ ಹೆಚ್ಚು ಗಣನೀಯ ಕುಸಿತವನ್ನು ಕಂಡಿದೆ.
ವರ್ಷದಿಂದ ವರ್ಷಕ್ಕೆ ಸಸ್ಯಾಹಾರಿ ಥಾಲಿಯ ಬೆಲೆಯಲ್ಲಿನ ಕಡಿತವು ಮುಖ್ಯವಾಗಿ ಟೊಮೆಟೊ ಬೆಲೆಯಲ್ಲಿನ ಇಳಿಕೆಗೆ ಕಾರಣವಾಗಿದೆ. ಜುಲೈ 2023 ರಲ್ಲಿ ಕೆಜಿಗೆ 110 ರೂ. ಇದ್ದ ಟೊಮ್ಯಾಟೊ ಬೆಲೆ ಇದೀಗ ಶೇಕಡಾ 40 ರಷ್ಟು ಕುಸಿದಿದೆ. ಉತ್ತರ ರಾಜ್ಯಗಳಲ್ಲಿ ಹಠಾತ್ ಪ್ರವಾಹದಿಂದ ಪೂರೈಕೆಯಲ್ಲಿ ವ್ಯತ್ಯಾಸ ಮತ್ತು ಕರ್ನಾಟಕದಲ್ಲಿ ಬೆಳೆಗಳಿಗೆ ಕೀಟಗಳ ಬಾಧೆಯಿಂದ ದರ ಹೆಚ್ಚಾಗಿತ್ತು.
ಆದಾಗ್ಯೂ ಸಸ್ಯಾಹಾರಿ ಥಾಲಿಯ ಬೆಲೆಯಲ್ಲಿನ ಇಳಿಕೆಗೆ ಈರುಳ್ಳಿ ಮತ್ತು ಆಲೂಗಡ್ಡೆಗಳ ಬೆಲೆಗಳು ಕಾರಣವಾಗಿದ್ದರೆ, ಮಾಂಸಾಹಾರಿ ಥಾಲಿ ಬೆಲೆ ಇಳಿಕೆಗೆ ಬ್ರಾಯ್ಲರ್ ಕೋಳಿ ಬೆಲೆಯಲ್ಲಿ ಅಂದಾಜು 11 ಪ್ರತಿಶತದಷ್ಟು ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿರೋದು ಕಾರಣವಾಗಿದೆ.
ಸಸ್ಯಾಹಾರಿ ಥಾಲಿಯ ಬೆಲೆಯಲ್ಲಿ ಶೇ. 7ರಿಂದ ಶೇ.11ರಷ್ಟು ಬೆಲೆ ಏರಿಕೆಗೆ ಟೊಮ್ಯಾಟೋ ಬೆಲೆ ಏರಿಕೆ ಕಾರಣವಾಗಿದೆ.
ಟೊಮೆಟೊ ಬೆಲೆಯು ತಿಂಗಳಿಗೆ 55 ಪ್ರತಿಶತದಷ್ಟು ಏರಿದ್ದು ಜೂನ್‌ನಲ್ಲಿ ಪ್ರತಿ ಕೆಜಿಗೆ ಅಂದಾಜು 42 ರೂ. ನಿಂದ ಜುಲೈನಲ್ಲಿ ಪ್ರತಿಕೂಲ ಹವಾಮಾನದ ಕಾರಣ 66 ರೂಪಾಯಿಗೆ ಏರಿತು.
ಇತರ ಪ್ರಮುಖ ತರಕಾರಿಗಳ ಬೆಲೆಗಳು ಸಹ ಗಣನೀಯ ಏರಿಕೆ ಕಂಡಿದ್ದು, ಈರುಳ್ಳಿ ಶೇ.20 ರಷ್ಟು ಮತ್ತು ಆಲೂಗಡ್ಡೆ ಶೇ.16 ರಷ್ಟು ತಿಂಗಳಿಂದ ತಿಂಗಳಿಗೆ ಏರಿಕೆಯಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ವೆಜ್ ಥಾಲಿಗೆ ಹೋಲಿಸಿದರೆ ಮಾಂಸಾಹಾರಿ ಥಾಲಿಯ ಬೆಲೆಯು ನಿಧಾನಗತಿಯಲ್ಲಿ ಏರಿತು. ಈ ನಿಧಾನಗತಿಯ ಹೆಚ್ಚಳವು ಸ್ಥಿರವಾದ ಬ್ರಾಯ್ಲರ್ ಕೋಳಿ ಬೆಲೆಗಳಿಗೆ ಕಾರಣವೆಂದು ಹೇಳಬಹುದು.
ಮನೆಯಲ್ಲಿ ಥಾಲಿಯನ್ನು ತಯಾರಿಸುವ ಸರಾಸರಿ ವೆಚ್ಚವನ್ನು ಭಾರತದಾದ್ಯಂತ ವಿವಿಧ ಭಾಗಗಳಲ್ಲಿನ ವಸ್ತುಗಳ ಬೆಲೆಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಮಾಸಿಕ ಬದಲಾವಣೆಗಳು ಮನೆಯ ವೆಚ್ಚಗಳ ಮೇಲೆ ವ್ಯಾಪಕ ಪರಿಣಾಮವನ್ನು ಪ್ರತಿಬಿಂಬಿಸುತ್ತವೆ. ಥಾಲಿ ಬೆಲೆಯಲ್ಲಿನ ಬದಲಾವಣೆ ಧಾನ್ಯಗಳು, ಬೇಳೆಕಾಳುಗಳು, ಬ್ರಾಯ್ಲರ್ ಕೋಳಿ, ತರಕಾರಿಗಳು, ಮಸಾಲೆಗಳು, ಖಾದ್ಯ ತೈಲ ಮತ್ತು ಅಡುಗೆ ಅನಿಲದ ಬೆಲೆಗಳು ಸೇರಿದಂತೆ ಹಲವು ಅಂಶಗಳ ಮೇಲೆ ಆಧರಿತವಾಗಿರುತ್ತವೆ.