ಬಾರ್ ನಲ್ಲಿ ಮಹಿಳೆ ರೇಟ್ ಕೇಳಿದ ಯುವಕ : ಕಣ್ಣೀರಿಡುತ್ತಾ ವಿಡಿಯೋ ಮೂಲಕ ನೋವು ಹಂಚಿಕೊಂಡ ಯುವತಿ

ಉತ್ತರ ಪ್ರದೇಶದ ನೋಯ್ಡಾದ ಗಾರ್ಡನ್ ಗ್ಯಾಲೇರಿಯಾ ಮಾಲ್‌ನಲ್ಲಿ ಕಿರುಕುಳದ ಆರೋಪದ ಮೇಲೆ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾಲ್‌ನೊಳಗೆ ಇರುವ ಬಾರ್‌ನಲ್ಲಿ ಘಟನೆ ನಡೆದಿದೆ. ತನಗೆ ಕಿರುಕುಳ ಮತ್ತು ಬೆದರಿಕೆ ಹಾಕಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ನಂತ್ರ ಎರಡು ಗುಂಪಿನ ಮಧ್ಯೆ ಘರ್ಷಣೆ ನೆಡದಿದ್ದು, ಅದರ ವಿಡಿಯೋ ವೈರಲ್‌ ಆಗಿದೆ.

ವಿಡಿಯೋದಲ್ಲಿ ಮಹಿಳೆಯೊಬ್ಬರು ಅಳ್ತಾ ಘಟನೆಯನ್ನು ವಿವರಿಸುತ್ತಿದ್ದಾರೆ. ವೈರಲ್ ವಿಡಿಯೋ ಪ್ರಕಾರ, ಎದುರಾಳಿ ಗುಂಪಿನ ಸದಸ್ಯರೊಬ್ಬರು ಬಾರ್‌ನೊಳಗೆ ಮಹಿಳೆ ರೇಟ್‌ ಕೇಳಿದ್ದಾರೆ. ಇದಕ್ಕೆ ಮಹಿಳೆ ವಿರೋಧಿಸಿದಾಗ  ಗುಂಪಿನಲ್ಲಿದ್ದ ಮಹಿಳೆ, ಉಪ ಪೊಲೀಸ್ ವರಿಷ್ಠಾಧಿಕಾರಿಯ ಮಗಳು ಎನ್ನುತ್ತ ಬೆದರಿಕೆ ಹಾಕಿದ್ದಾಳೆ. ಸಂತ್ರಸ್ತೆಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಡಿಎಸ್‌ಪಿ ಪುತ್ರಿ ಎಚ್ಚರಿಸಿದ್ದಾರೆ.

ಘಟನೆ ನಂತ್ರ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಅಖಿಲೇಶ್‌ ಯಾದವ್‌ ಪ್ರತಿಕ್ರಿಯೆ ನೀಡಿದ್ದಾರೆ.   ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಅಖಿಲೇಶ್ ಯಾದವ್ ಯುಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದು ನೋಯ್ಡಾದ ಸೊಸೆಯ ನೋವು. ಉತ್ತರ ಪ್ರದೇಶದಲ್ಲಿ ಯಾವುದೇ ತಂಗಿ, ಮಗಳು ಅಥವಾ ಸೊಸೆ ಸುರಕ್ಷಿತವಾಗಿಲ್ಲ ಏಕೆಂದರೆ ಪೊಲೀಸ್ ಠಾಣೆಗಳು ಸರ್ಕಾರ ಮತ್ತು ಆಡಳಿತವು ನೀಡಿದ ಆರ್ಥಿಕ ಗುರಿಗಳನ್ನು ಪೂರೈಸುವಲ್ಲಿ ನಿರತವಾಗಿವೆ ಎಂದಿದ್ದಾರೆ.

https://twitter.com/yadavakhilesh/status/1820789350755356943?ref_src=twsrc%5Etfw%7Ctwcamp%5Etweetembed%7Ctwterm%5E1820789350755356943%7Ctwgr%5E468650b393dc9a57d7118d9268b41a478df00bcb%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftopindiannews-epaper-dh90d0f8f90ef3441695ffc4a0a4a51e7c%2Faskedmyratewomanallegesmisbehaviorinnoidamallakhileshyadavhitsoutatyogigovtvideo-newsid-n625451267

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read